* ಬೆಂಗಳೂರು- ಮಂಗಳೂರು ಮಾರ್ಗದಲ್ಲಿ
* ಡೀಸೆಲ್ ರೈಲಿಗೆ ವಿದಾಯ
ಬೆಂಗಳೂರು: ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಚಲಿಸುತ್ತಿರುವ ಡಿಸೇಲ್ ಇಂಜಿನ್ ರೈಲಿನ ಬದಲು, ವಿದ್ಯುತ್‌ಚಾಲಿತ ರೈಲುಗಳ ಸಂಚಾರ ಶೀಘ್ರದಲ್ಲೇ ಆರಂಭವಾಗಲಿದೆ.
ಸಕಲೇಶಪುರ ಮತ್ತು ಸುಬ್ರಹ್ಮಣ್ಯ ಮಾರ್ಗದ 55 ಕಿ.ಮೀ. ಘಟ್ಟ ಪ್ರದೇಶದಲ್ಲಿ ವಿದ್ಯುದೀಕರಣಗೊಂಡ ಸುವಾರು ಒಂದು ವಷರ್ದ ಬಳಿಕ, ಶ್ರೀದಲ್ಲೇ ವಿದ್ಯುತ್‌ಚಾಲಿತ ಇಂಜಿನ್ ರೈಲುಗಳ ಸಂಚಾರಕ್ಕೆ ನೈಋತ್ಯ ರೈಲ್ವೆ ಮುಂದಾಗಿದೆ.
ಘಟ್ಟ ಪ್ರದೇಶದಲ್ಲಿ ಹಲವಾರು ಕಡೆ ಕಡಿದಾದ, ಇಳಿಜಾರು, ಸುರಂಗ ಮತ್ತು ಸೇತುವೆಗಳಿವೆ. ಈ ಮಾರ್ಗದಲ್ಲಿ ಸಂಚರಿಸುವ ಏಳು ರೈಲುಗಳಿಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಇಂಜಿನ್‌ಗಳಿಗೆ ಬದಲಾಯಿಸಲು ಎಸ್‌ಡಬ್ಲ್ಯುಆರ್ ಈಗಾಗಲೇ ಕ್ರಮವಹಿಸಿದೆ.
ಎಸ್‌ಎಂವಿಟಿ ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್, ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್, ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್, ಗೋಮಟೇಶ್ವರ ಎಕ್ಸ್‌ಪ್ರೆಸ್, ವಿಜಯಪುರ- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಮತ್ತು ಕೆಎಸ್‌ಆರ್ ಬೆಂಗಳೂರು- ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ಈ ರೈಲುಗಳ ಪೈಕಿ ನಾಲ್ಕು ರೈಲುಗಳು ಪ್ರಸ್ತುತ ಡೀಸೆಲ್‌ನಿಂದ ಚಲಿಸುತ್ತಿವೆ. ಉಳಿದವು ವಿದ್ಯುತ್ ಇಂಜಿನ್‌ಗಳು ಮತ್ತು ಭಾಗಶಃ ಡೀಸೆಲ್ ಇಂಜಿನ್ ಹೊಂದಿವೆ. ಇನ್ನುಮುಂದೆ ಎಲ್ಲ ರೈಲುಗಳು ವಿದ್ಯುತ್‌ನಿಂದಲೇ ಚಾಲನೆ ಅಗಲಿವೆ.
ಕೋಝೀಕೋಡ್ ಎಕ್ಸ್‌ಪ್ರೆಸ್:
ಎಸ್‌ಎಂವಿಟಿ ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ಮತ್ತು ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ಪ್ರಸ್ತುತ ಘಟ್ಟ ಪ್ರದೇಶವನ್ನು ದಾಟಲು ವಾತ್ರ ಭಾಗಶಃ ಡೀಸೆಲ್ ಇಂಜಿನ್‌ಗಳನ್ನು ಬಳಸಲಾಗುತ್ತಿದೆ. ಪ್ರಸ್ತುತ ಸಕಲೇಶಪುರದಲ್ಲಿ ಟ್ರಾಕ್ಷನ್ ಸಬ್‌ಸ್ಟೇಷನ್ ಕೆಲಸ ವಾಡುತ್ತಿದ್ದೇವೆ. ಅದು ಪೂರ್ಣಗೊಂಡ ನಂತರ, ಈ ವಿಭಾಗಕ್ಕೆ ವಿದ್ಯುತ್ ಪರೀಕ್ಷೆಗಳನ್ನು ನಡೆಸುವ ನಿರೀಕ್ಷೆಯಿದೆ. ವಂದೇ ಭಾರತ್‌ಗಾಗಿ ರಿಸರ್ಚ್ ಡಿಸೈನ್ಸ್ ಆ್ಯಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಪರೀಕ್ಷೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ಎಸ್‌ಡಬ್ಲ್ಯುಆರ್ ಮೈಸೂರು ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.