ಕಾನ್ಪುರ: ಪೆಟ್ರೋಲ್, ಡೀಸೆಲ್ಗಳ ಬೆಲೆ ಗಗನಚುಂಬಿಯಾಗುತ್ತಿವೆ. ಹವಾಮಾನ ವೈಪರೀತ್ಯಗಳನ್ನು ತಡೆಯಲು ಜಗತ್ತಿನಾದ್ಯಂತ ಸರ್ಕಾರಗಳು ಪರ್ಯಾಯ ಇಂಧನಗಳ ಮೇಲೆ ಓಡುವ ವಾಹನಗಳನ್ನು ಪ್ರಮೋಟ್ ಮಾಡುತ್ತಿವೆ. ಹೀಗಿರುವಾಗ ಭಾರತದಲ್ಲೂ ಎಲೆಕ್ಟ್ರಿಕ್ ಕಾರು ಮತ್ತು ಬೈಕುಗಳು ಮಾರುಕಟ್ಟೆ ಪಡೆಯುತ್ತಿವೆ.
ಇದೇ ದಿಕ್ಕಿನಲ್ಲಿ ನಡೆದಿರುವ ಪ್ರಯತ್ನದಲ್ಲಿ ಉತ್ತರಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆಗೂ ಎಲೆಕ್ಟ್ರಿಕ್ ವಾಹನಗಳ ಸೇರ್ಪಡೆ ಮಾಡುವ ಪ್ರಯತ್ನ ನಡೆದಿದೆ. ರಾಜ್ಯ ಸರ್ಕಾರವು ಇಂದು 20 ಎಲೆಕ್ಟ್ರಿಕ್ ಬಸ್ಗಳಿಗೆ ಕಾನ್ಪುರ ನಗರ ಸಾರಿಗೆ ಸಂಸ್ಥೆಯಡಿ ಚಾಲನೆ ನೀಡಿದೆ.
ರಾಜ್ಯ ಸಚಿವ ಸತೀಶ್ ಮಹಾನಾ 20 ಎಲೆಕ್ಟ್ರಿಕ್ ಬಸ್ಗಳೊಂದಿಗೆ ಒಂದು ಚಾರ್ಜಿಂಗ್ ಸ್ಟೇಷನ್ಗೂ ವಿದ್ಯುಕ್ತ ಚಾಲನೆ ನೀಡಿದರು. ಮುಂದಿನ 15 ದಿನಗಳಲ್ಲಿ ಇನ್ನೂ ಸುಮಾರು 60 ಎಲೆಕ್ಟ್ರಿಕ್ ಬಸ್ಗಳನ್ನು ಕಾನ್ಪುರ ನಗರದ ರಸ್ತೆಗಳ ಮೇಲೆ ಕಾಣಬಹುದು ಎಂದರು. (ಏಜೆನ್ಸೀಸ್)