ಕೋಲಾರ: ಸ್ಥಳಿಯ ಸಂಸ್ಥೆಗಳ ಆಡಳಿತ ಮಂಡಳಿ ಅಧಿಕಾರ ಮುಗಿಯಲಿದ್ದು, ಮೀಸಲಾತಿ ಪಟ್ಟಿ ಬಂದ ಕೂಡಲೇ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ಹೇಳಿದರು.
ಖಾಸಗಿ ಕಾರ್ಯಕ್ರಮದ ಬುಧವಾರ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೆಲ ಸ್ಥಳಿಯ ಸಂಸ್ಥೆಗಳ ಅವಧಿ ಈ ತಿಂಗಳಲ್ಲಿ ಮುಗಿಯಲಿದೆ. ಜನವರಿಗೆ ಗ್ರಾಪಂ ಅವಧಿ ಮುಗಿಯಲಿದ್ದು, ಮೀಸಲಾತಿ ಪಟ್ಟಿ ಪ್ರಕಟಗೊಂಡ ಕೂಡಲೇ ಚುನಾವಣೆಗೆ ಸಿದ್ಧತೆ ಕೈಗೊಳ್ಳಲಾಗುವುದು. ಜಿಪಂ, ತಾಪಂ ಅವಧಿ ಮುಗಿದು 5 ವರ್ಷ ಕಳೆದಿದ್ದು, ಸರ್ಕಾರವು ಕ್ಷೇತ್ರಗಳ ಮೀಸಲಾತಿ ಅಂತಿಮಗೊಳಿಸಿ ಪಟ್ಟಿ ನೀಡಬೇಕಾಗಿದೆ ಎಂದರು.
ಎಲ್ಲ ದಾನಗಳಿಗಿಂತ ಮಹತ್ವವಾದದ್ದು ಮತದಾನದ ಹಕ್ಕು, ಮತ ಪೆಟ್ಟಿಗೆ ಬಂದ ನಂತರ ಚುನಾವಣೆಯ ಮೂಲಕ ಯೋಗ್ಯ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಇರುವ ಅವಕಾಶ ಮತದಾನ. ಯಾರು ಸಹ ಈ ಅವಕಾಶದಿಂದ ವಂಚನೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ಪ್ರತಿ ವರ್ಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬಿಹಾರದ ವೊಟು ಚೋರಿಯಂತಹ ಪ್ರಕರಣ ರಾಜ್ಯದಲ್ಲಿ ಕಂಡು ಬಂದಿಯೇ ಎಂಬುದರ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಚುನಾವಣಾ ಆಯೋಗದಿಂದ ಪರಿಷ್ಕರಣೆ ಮಾಡಿಲ್ಲ. ಮಾಡಿದಿದ್ದರೆ ಗೊತ್ತಾಗಬಹುದು. ಇನ್ನು ಮಾಲೂರು ವಿಧಾನ ಸಭಾ ಕ್ಷೇತ್ರದ ಸಂಬಂಧಿಸಿದ ಮರು ಮತ ಏಣಿಕೆ ಸಂಬಂಧವು ರಾಜ್ಯ ಆಯೋಗದ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರ ವ್ಯಕ್ತಿಗೆ ಒಳಪಟ್ಟಿದ್ದು ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.