ಬೆಂಗಳೂರು: ವಿವಿಧ ಕಾರಣಗಳಿಂದ ಖಾಲಿ ಇರುವ/ತೆರವಾಗಿರುವ ಗ್ರಾಮ ಪಂಚಾಯಿತಿ 265 ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ(Elections announced for 265 Gram Panchayat member seats) ಪ್ರಕಟಿಸಿದೆ. 31 ಜಿಲ್ಲೆಯ 135 ತಾಲೂಕುಗಳ 223 ಗ್ರಾಮ ಪಂಚಾಯಿತಿಗಳಲ್ಲಿನ 265 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸುವ ದಿನಾಂಕ: ಮೇ 8
ನಾಮಪತ್ರ ಸಲ್ಲಿಸಲು ಕೊನೆಯ ದಿನ: ಮೇ 14
ನಾಮಪತ್ರ ಪರಿಶೀಲನೆ ದಿನಾಂಕ: ಮೇ 15
ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ: ಮೇ 17
ಮತದಾನ ದಿನ: ಮೇ 25
ಮರುಮತದಾನ ಅವಶ್ಯವಿದ್ದರೆ ಮತದಾನ ನಡೆಯುವ ದಿನ: ಮೇ 27
ಮತ ಎಣಿಕೆ: ಮೇ 28(ಬೆಳಗ್ಗೆ 8 ರಿಂದ)
ಚುನಾವಣೆ ನೀತಿ ಸಂಹಿತೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇ 8 ರಿಂದ ಮೇ 28ರ ವರೆಗೆ ಜಾರಿಯಲ್ಲಿರುತ್ತದೆ.