ಸಾಲಿಗ್ರಾಮ: ತಾಲೂಕಿನ ಮಲುಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಂ.ಎಸ್.ತೇಜುಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಎಂ.ಎಸ್.ತೇಜುಮೂರ್ತಿ ಮತ್ತು ಚಂದ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ರಾಮಚಂದ್ರ ಮತ್ತು ಕುಮಾರ ಅವರು ನಾಮಪತ್ರ ಸಲ್ಲಿಸಿದ್ದರು.
ನಂತರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿಗಳು ತಲಾ ಆರು ಮತಗಳನ್ನು ಪಡೆಯುವ ಮೂಲಕ ಸಮಬಲ ಸಾಧಿಸಿದರು. ನಂತರ ಲಾಟರಿಯ ಮೂಲಕ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ಇದರಲ್ಲಿ ಅಧ್ಯಕ್ಷರಾಗಿ ಎಂ.ಎಸ್.ತೇಜುಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ರಾಮಚಂದ್ರ ಅವರು ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಎಸ್.ರವಿ ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಚಂದ್ರ, ಎಂ.ಎಸ್.ಗಣೇಶ, ನಾರಾಯಣಗೌಡ, ಎಂ.ಕೆ.ರಾಘವೇಂದ್ರ, ಕುಮಾರ, ಎಂ.ಎಸ್.ತೇಜುಮೂರ್ತಿ, ಎಸ್.ಎನ್.ಜ್ಯೋತಿ, ಲಲಿತಾ, ಎಂ.ಆರ್.ನಟೇಶ್, ಎಂ.ಎಸ್.ಮೂರ್ತಿ, ರಾಮಚಂದ್ರ, ಮಾರ್ಗ ವಿಸ್ತರಣಾಧಿಕಾರಿ ನೇಮಿನಾಥ ಮಾಕಾಣಿ, ಕಾರ್ಯದರ್ಶಿ ಎಂ.ಇ.ಜ್ಯೋತಿ, ಸಿಬ್ಬಂದಿ ನಂಜುಂಡ, ಎಂ.ಸಿ.ದಿನೇಶ್ ಪಾಲ್ಗೊಂಡಿದ್ದರು.