ನ್ಯೂಸ್

ಚುನಾವಣೆ ಸಿಬ್ಬಂದಿಗೆ ಗುಲಾಬಿ ನೀಡಿ ಸ್ವಾಗತಿಸಿದ ಶಿಕ್ಷಕರು

ರಾಣೆಬೆನ್ನೂರ: ಮಾರುತಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 17ರ ಮತಗಟ್ಟೆಗೆ ಬಂದ ಚುನಾವಣಾ ಸಿಬ್ಬಂದಿಯನ್ನು ಶಾಲೆಯ ಶಿಕ್ಷಕರು ಗುಲಾಬಿ ಹೂವು ನೀಡಿ ಸ್ವಾಗತಿಸಿದರು.
ಶಾಲೆಯ ಮುಖ್ಯಶಿಕ್ಷಕ ಬಿ.ಪಿ. ಶಿಡೇನೂರ, ಬಿಎಲ್‌ಓಗಳಾದ ಐ.ಎಸ್. ಕಿಲ್ಲೆದಾರ, ಪ್ರತಿಭಾ ಮೈಲಾರಕಳ್ಳಿಮಠ, ಸಾಕಮ್ಮ ಅನಿಲಕುಮಾರ ಮತ್ತಿತರರಿದ್ದರು.