ಕೋಲಾರ: ಜಿಲ್ಲೆಯಲ್ಲಿ 3 ನಗರಸಭೆ ಹಾಗೂ 3 ಪುರಸಭೆಗಳು ಇದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಈಗಾಗಲೇ ಮೀಸಲಾತಿ ಪ್ರಕಟಿಸಿದ್ದು, 20 ದಿನದಲ್ಲಿ ಚುನಾವಣೆ ನಡೆಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಸಲು ನಗರಸಭೆಗಳಿಗೆ ಎಸಿ ಹಾಗೂ ಪುರಸಭೆಗಳಿಗೆ ಆಯಾ ತಹಸೀಲ್ದಾರ್ಗಳನ್ನು ರಿಟರ್ನಿಂಗ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದ್ದು, ಚುನಾವಣೆ ಪ್ರಕ್ರಿಯೆ ಕುರಿತು ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯ ಮಾಲೂರು ಸರ್ವೇ ಇಲಾಖೆಯಲ್ಲಿ ಅರ್ಜಿಗಳು ಸಕಾಲಕ್ಕೆ ವಿಲೇ ಆಗುತ್ತಿಲ್ಲ ಎಂದು ದೂರುಗಳು ಬಂದಿದ್ದು, ಈ ಸಂಬಂಧ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದೆ. ಸಕಾಲದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇ ಆಗುತ್ತಿಲ್ಲ. ಇದನ್ನು ಪರಿಶೀಲಿಸಿ ಕೆಲಸಕ್ಕೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿ ತಿಂಗಳು
ಕಂದಾಯ ಅಧಿಕಾರಿಗಳ ಸಭೆ ಆಯೋಜಿಸಲಾಗುತ್ತಿದೆ. ಕಳೆದ 6 ತಿಂಗಳಿಂದಲೂ ಆನ್ಲೆನ್ ಸೇವೆಗಳಲ್ಲಿ ಜಿಲ್ಲೆಯು ರಾಜ್ಯದಲ್ಲೇ ಮೊದಲನೇ ಸ್ಥಾನ ಪಡೆದುಕೊಂಡಿದೆ. ಉದಾಹರಣೆಗೆ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ 45ಕ್ಕೂ ಹೆಚ್ಚು ಸೇವೆಗಳನ್ನು ನೀಡುತ್ತಿದ್ದೇವೆ. ಈ ಮೊದಲು 20 ಸಾವಿರ ಪಿಂಚಣಿ ಸೇವೆ, ಪ್ರಮಾಣ ಪತ್ರಗಳನ್ನು ನೀಡುತ್ತಿದ್ದೆವು, ಆದರೆ ಜುಲೆನಲ್ಲಿ 51 ಸಾವಿರ ಪಿಂಚಣಿ ಸೇವೆ, ಪ್ರಮಾಣ ಪತ್ರಗಳನ್ನು ನೀಡಿದ್ದೇವೆ. ಆಧಾರ್ ಸೀಡಿಂಗ್, ಆರ್ಟಿಸಿನಲ್ಲಿ ಶೇ.85 ಪ್ರಗತಿ ಮೂಲಕ ಪ್ರಥಮ ಸ್ಥಾನದಲ್ಲಿದ್ದೇವೆ. ಇದರಿಂದಾಗಿ ಶ್ರೀ ಪರಿಹಾರ ನೀಡುವ ಜತೆಗೆ ಅಕ್ರಮಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದರು.
ಸರ್ಕಾರಿ ಜಾಗಗಳನ್ನು ಸರ್ವೇ ಮಾಡಿ ಆನ್ಲೆನ್ನಲ್ಲಿ ತುಂಬುವುದರಲ್ಲಿಯೂ ಮೊದಲನೇ ಸ್ಥಾನದಲ್ಲಿದ್ದೇವೆ. ಜತೆಗೆ ಸಕಾಲದಲ್ಲಿಯೂ ಈ ಮೊದಲು 21ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಬಂದಿದ್ದೇವೆ. 4 ಇಲಾಖೆಗಳಲ್ಲಿ ತಡವಾಗಿ ಸೇವೆ ನೀಡುತ್ತಿದ್ದು, ಅದನ್ನು ಸರಿಪಡಿಸಿ 1ನೇ ಸ್ಥಾನಕ್ಕೆ ಬರುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಮಾಲೂರು ಜಿಲ್ಲೆಯ ಟೇಕಲ್ ಸುತ್ತಮುತ್ತ ಗಣಿ ಪ್ರದೇಶದಲ್ಲಿ ಇತ್ತೀಚೆಗೆ ಜೆಸಿಬಿ, ಹಿಟಾಚಿ ಯಂತ್ರ ಬಳಕೆ ಮಾಡಿ ಕಾರ್ಮಿಕರು ಮೃತಪಟ್ಟಿರುವ ಸಂಬಂಧ ಚಟುವಟಿಕೆಗಳನ್ನು ನಿಲ್ಲಿಸಲಾಗಿತ್ತು. ಈ ಸಂಬಂಧ ಕಲ್ಲು ಕುಟುಕರು ಆ ಭಾಗದ ಶಾಸಕರನ್ನು ಹಾಗೂ ಜಿಲ್ಲಾ ಮಂತ್ರಿಗಳನ್ನು ಭೇಟಿ ಮಾಡಿರುವ ಪಾರಂಪರಿಕ ಕಲ್ಲುಕುಟುಕರು ಕಾನೂನು ಬದ್ಧವಾಗಿಯೇ ಅನುಮತಿ ನೀಡುವಂತೆ ಕೋರಿದ್ದರು. ಆದರ ಆಧಾರದ ಮೇರೆಗೆ ಅನುಮತಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಅನುಮತಿ ನೀಡಲಾಗಿದೆ ಎಂದರು.
ಇನ್ನು ಮುಂದೆ ಕಾನೂನು ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸುವುದು, ಸಿಡಿ ಮದ್ದುಗಳನ್ನು ಬಳಕೆ ಮಾಡುವುದರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಕಳೆದ ಬಾರಿ ಅರ್ಜಿಗಳನ್ನು ಆಹ್ವಾನಿಸಿದಾಗ 1,063 ಅರ್ಜಿ ಸಲ್ಲಿಕೆಯಾಗಿವೆ. ಈಗ ಅಲ್ಲಿ 1,062 ್ಲಾ$್ಯಟ್ಗಳನ್ನು ನಿರ್ಮಿಸಲು ಜಾಗ ಗುರುತಿಸಲಾಗಿದ್ದು, ಟಾಸ್ಕ್ ೋರ್ಸ್ ಸಮಿತಿಯಲ್ಲಿ ಅರ್ಜಿಗಳನ್ನು ಕುಲಂಕುಶವಾಗಿ ಪರಿಶೀಲನೆ ನಡೆಸಿ ಅಧಿಕೃತವಾಗಿ ಅನುಮತಿ ನೀಡಲಾಗುವುದು, ಮುಂದಿನ ದಿನಗಳಲ್ಲಿ ಸಾವು ನೋವುಗಳು ಸಂಭವಿಸದಂತೆ ಎಚ್ಚರವಹಿಸಲಾಗುವುದು ಎಂದು ತಿಳಿಸಿದರು.