ಎಚ್.ಡಿ.ಕೋಟೆ: ಕಳೆದ ತಿಂಗಳು ಎಚ್.ಡಿ.ಕೋಟೆ ಆದಿ ಕರ್ನಾಟಕ ಮಹಾಸಭಾದ ವತಿಯಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಸಮಾಜವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ನೂತನ ಅಧ್ಯಕ್ಷ ಹೈರಿಗೆ ಶಿವರಾಜು ತಿಳಿಸಿದರು.
ತಾಲೂಕಿನಲ್ಲಿ 104 ಗ್ರಾಮಗಳಿದ್ದು, ಈ ಹಳ್ಳಿಗಳಲ್ಲಿ 75 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ್ದು ತಾಲೂಕಿನಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಸಮಾಜವಾಗಿ ಹೊರಹೊಮ್ಮಿದ್ದು, ಈ ಸಮಾಜದ ಆಗು-ಹೋಗುಗಳನ್ನು ಗುರುತಿಸಿ ಮುನ್ನಡೆಸಿಕೊಂಡು ಹೋಗಲು ನಮ್ಮನ್ನು ಸಾರಥಿಯನ್ನಾಗಿ ಮಾಡಿದ್ದು ಅವರಿಗೆ ಅಭಾರಿಯಾಗಿದ್ದೇವೆ ಎಂದರು.
ಸಮಾಜದಲ್ಲಿ ಮುಂದಿನ ಒಂದು ವರ್ಷದ ಅವಧಿಗೆ ಪಧಾದಿಕಾರಿಗಳನ್ನು ಆಯ್ಕೆ ಮಾಡಿ ಹಲವು ಜಟಿಲ ಸಮಸ್ಯೆಗಳನ್ನು ಬಗೆಹರಿಸಲು ಹಿರಿಯರು ಸೂಚನೆ ನೀಡಿದ್ದು, ಆ ಸಮಸ್ಯೆಗಳನ್ನು ಬಗೆಹರಿಸಲು ಚಿತ್ತ ಹರಿಸಲಾಗುವುದು ಎಂದರು. ಅಧ್ಯಕ್ಷರ ಆಯ್ಕೆ ವೇಳೆ 28 ಆಕಾಂಕ್ಷಿಗಳು ಇದ್ದರು, ಅವರನ್ನೆಲ್ಲ ಒಗ್ಗೂಡಿಸಿ ಸಮಾಜದ ಏಳಿಗೆಗೆ ಮುನ್ನಡೆಯಲಾಗುವುದು ಎಂದರು.
ನೂತನ ಪದಾಧಿಕಾರಿಗಳ ವಿವರ: ಅಧ್ಯಕ್ಷ ಹೈರಿಗೆ ಶಿವರಾಜು, ಹಂಪಾಪುರ ಹೋಬಳಿ ಉಪಾಧ್ಯಕ್ಷ ಸೋಮಣ್ಣ ಕನ್ನೇನಹಳ್ಳಿ, ಕಸಬಾ ಹೋಬಳಿ ಉಪಾಧ್ಯಕ್ಷ ಹೆಬ್ಬಲಗುಪ್ಪೆ ರವಿ, ಎಚ್.ಡಿ. ಕೋಟೆ ಉಪಾಧ್ಯಕ್ಷ ನಂಜಪ್ಪ, ಅಂತರಸಂತೆ ಉಪಾಧ್ಯಕ್ಷ ನಾಗಯ್ಯ ಮಳಲಿ, ಪ್ರಧಾನ ಕಾರ್ಯದರ್ಶಿ ಭೀಮನಹಳ್ಳಿ ಸೋಮೇಶ್, ಸಹಕಾರ್ಯದರ್ಶಿ ಹೊಸಮಾಳ ಮಂಜು, ಖಜಾಂಚಿ ಸೋಗಳ್ಳಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.