ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮ ಕಚುವಿನಹಳ್ಳಿಯಲ್ಲಿ ಭಾರತ ಪರಿಸರ ಅಭಿವೃದ್ಧಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಕೆ.ಎಸ್.ಆನಂದ್, ಸದಸ್ಯರಾಗಿ ಕೆ.ಡಿ.ಮಹೇಶ, ಕೆ.ಬಿ.ಕುಮಾರ, ಶಿವಣ್ಣನಾಯ್ಕ, ರವಿಶೆಟ್ಟಿ, ಶ್ರೀನಿವಾಸ, ಶಿವಮ್ಮ ಲೋಕೇಶ್, ಮಹದೇವಮ್ಮ , ಕೌಶಲ್ಯಾ ದೇವರಾಜ್, ಸೋನಾ ಮಹೇಶ್, ಸರಸುಮಣಿ ಹಾಗೂ ಕಾರ್ಯದರ್ಶಿಯಾಗಿ ಹುಣಸೂರು ವಲಯದ ಡಿಆರ್‌ಎಫ್‌ಒ ಪ್ರಮೋದ್ ಆಯ್ಕೆಯಾದರು.
ಆಯ್ಕೆ ವೇಳೆ ಗ್ರಾಮದ ಮುಖಂಡರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.