ಹಲಗೂರು ಸಮೀಪದ ಬೆನಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಗ್ರಾಮಸ್ಥರು ಮತ್ತು ಸಿಬ್ಬಂದಿ ಅಭಿನಂದಿಸಿದರು. ಡಿ.ಸೌಮ್ಯಾ, ಪ್ರಸನ್ನ, ಭೀಮೇಶ್, ರಾಜು, ಕೀರ್ತಿ ಇತರರಿದ್ದರು. 
ನ್ಯೂಸ್

ಬೆನಮನಹಳ್ಳಿ ನೂತನ ನಿರ್ದೇಶಕರ ಚುನಾವಣೆ

ಹಲಗೂರು: ಸಮೀಪದ ಬೆನಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ಚುನಾವಣೆ ಗುರುವಾರ ನಡೆಯಿತು.

ನೂತನ ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಬಿ.ಸಿ.ಭೀಮೇಗೌಡ, ಬಿ.ಎಂ.ಸ್ವಾಮಿ, ಕೃಷ್ಣೇಗೌಡ, ಜಿ.ರಮೇಶ್, ಬಿ.ಪಿ.ಪ್ರಕಾಶ್, ಬಿ.ಎಸ್. ತೇಜಸ್ವಿನ್, ಪ.ಜಾ. ಮೀಸಲು ಕ್ಷೇತ್ರದಿಂದ ಚನ್ನಬಸಮ್ಮ, ಮಹಿಳಾ ಮೀಸಲು ಕ್ಷೇತ್ರದಿಂದ ರತ್ನಮ್ಮ, ಸುಧಾ, ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಬಿ.ಎಂ.ನಾಗರಾಜು ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ರಾಮಕೃಷ್ಣ ಕರ್ತವ್ಯ ನಿರ್ವಹಿಸಿದರು. ಆಯ್ಕೆಯಾದ ನೂತನ ನಿರ್ದೇಶಕರನ್ನು ಗ್ರಾಮಸ್ಥರು ಮತ್ತು ಸಿಬ್ಬಂದಿ ಅಭಿನಂದಿಸಿದರು.

ಸಂಘದ ಕಾರ್ಯದರ್ಶಿ ಡಿ.ಸೌಮ್ಯಾ, ಮುಖಂಡರಾದ ಪ್ರಸನ್ನ, ಭೀಮೇಶ್, ಸಿಬ್ಬಂದಿ ರಾಜು, ಕೀರ್ತಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಹಲಗೂರು ಸಮೀಪದ ಬೆನಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ನಿರ್ದೇಶಕರನ್ನು ಗ್ರಾಮಸ್ಥರು ಮತ್ತು ಸಿಬ್ಬಂದಿ ಅಭಿನಂದಿಸಿದರು. ಡಿ.ಸೌಮ್ಯಾ, ಪ್ರಸನ್ನ, ಭೀಮೇಶ್, ರಾಜು, ಕೀರ್ತಿ ಇತರರಿದ್ದರು.