ಹುಣಸೂರು ನಗರದ ಡೀಡ್ ಸಂಸ್ಥೆ ಆವರಣದಲಿ ಆಯೋಜಿಸಿದ್ದ ಸಭೆಯಲ್ಲಿ ಆರ್‌ಪಿಐ ತಾಲೂಕು ಅಧ್ಯಕ್ಷರಾಗಿ ನಾಗಣ್ಣ ದೇವಾಡಿಗ ಮತ್ತು ಭೀಮವಾದ ಸಂಘಟನೆ ಅಧ್ಯಕ್ಷರಾಗಿ ರಂಗನಾಥ್ ನೇಮಕಗೊಂಡರು. ಡಾ.ಎಸ್.ಶ್ರೀಕಾಂತ್, ಕೆ.ಬಿ.ರಾಜು, ಪ್ರಜ್ವಲ್ ಇತರರಿದ್ದರು. 
ನ್ಯೂಸ್

ದಸಂಸ ಭೀಮವಾದ ಸಂಘಟನೆಗೆ ಅಧ್ಯಕ್ಷರ ಆಯ್ಕೆ

ಹುಣಸೂರು: ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆಯ ತಾಲೂಕು ಅಧ್ಯಕ್ಷರಾಗಿ ನಾಗಣ್ಣ ದೇವಾಡಿಗ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್‌ಪಿಐ) ಪಕ್ಷದ ತಾಲೂಕು ಅಧ್ಯಕ್ಷರಾಗಿ ದಲಿತ ಮುಖಂಡ ರಂಗನಾಥ್ ನೇಮಕಗೊಂಡರು.

ನಗರದ ಡೀಡ್ ಸಂಸ್ಥೆಯಲ್ಲಿ ಶನಿವಾರ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ಮತ್ತು ಆರ್‌ಪಿಐ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ವೇಳೆ ಮಾತನಾಡಿದ ಆರ್‌ಪಿಐನ ರಾಜ್ಯ ಸಂಚಾಲಕ ಕೆ.ಬಿ.ರಾಜು, ಈ ದೇಶದ ಮೂಲ ನಿವಾಸಿಗಳು ರಾಜಕೀಯ ಅಧಿಕಾರ ಹೊಂದಲು ಕೆಲಸ ಮಾಡಲು ನಾವೆಲ್ಲರೂ ಬದ್ಧರಾಗಿದ್ದೇವೆ. ಅಲ್ಲದೆ ಬುದ್ಧರ ವೈಚಾರಿಕ ಮಾರ್ಗದಲ್ಲಿ ಸಮಾಜ ಸೇವೆ ಮಾಡಬೇಕಿದೆ. ಶೋಷಿತ ಸಮಾಜಗಳ ನ್ಯಾಯಕ್ಕಾಗಿ ಮಾಡುವ ಹೋರಾಟಕ್ಕೆ ಎಲ್ಲರ ಬೆಂಬಲ ಅಗತ್ಯ. ಈ ದಿಶೆಯಲ್ಲಿ ಆರ್‌ಪಿಐ ಪಕ್ಷ ಮುಂದಡಿಯಿಟ್ಟಿದೆ. ತಾಲೂಕಿನಲ್ಲಿ ಪಕ್ಷ ಸಂಘಟನೆಗಾಗಿ ಒತ್ತಡ ಇದ್ದು, ಈ ನಿಟ್ಟಿನಲ್ಲಿ ಭೀಮವಾದ ಸಂಘಟನೆ ಮತ್ತು ಆರ್‌ಪಿಐ ಪಕ್ಷದ ಪೂರ್ವಭಾವಿ ಸಭೆ ನಡೆಸಲಾಗಿದೆ ಎಂದರು.

ಇದೇ ವೇಳೆ ಆರ್‌ಪಿಐ ಸಂಘಟನಾ ಸಂಚಾಲಕರಾಗಿ ಮೂಕನಹಳ್ಳಿ ಚಂದ್ರೇಗೌಡ, ಯುವ ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಪ್ರಜ್ವಲ್ ನೇಮಕಗೊಂಡರು. ಮುಖಂಡರಾದ ರಮೇಶ್, ಜಗದೀಶ್, ಮೋಹಿತ್, ಯಶವಂತ, ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಉಪಸ್ಥಿತರಿದ್ದರು.