ನ್ಯೂಸ್

ಚುನಾವಣಾ ಅಕ್ರಮ; ನಗದು ಸೇರಿ 443.91 ಕೋಟಿ ರೂ. ವಸ್ತು ವಶ

Bengaluru - Political - Vilas Melagiri

ಬೆಂಗಳೂರು: ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾ ಆಯೋಗ ಈವರೆಗೆ 93.93 ಕೋಟಿ ರೂ. ನಗದು ಸೇರಿದಂತೆ 443.91 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಶುಕ್ರವಾರ 0.05 ಕೋಟಿ ರೂ. ನಗದು ಸೇರಿ ಈವರೆಗೆ 93.93 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈವರೆಗೆ 178.28 ಕೋಟಿ ರೂ. ಬೆಲೆಯ ಮದ್ಯ, 11.36 ಕೋಟಿ ರೂ. ಮೌಲ್ಯದ ಡ್ರಗ್ಸ್, 76.75 ಕೋಟಿ ರೂ. ಮೊತ್ತದ ಚಿನ್ನ, 1.18 ಕೋಟಿ ರೂ. ಮೊಬಲಗಿನ ಬೆಳ್ಳಿ, 1.22 ಕೋಟಿ ರೂ. ಬೆಲೆ ಬಾಳುವ ವಜ್ರ, 8.64 ಕೋಟಿ ರೂ. ಬೆಲೆ ಬಾಳುವ ಉಚಿತ ಉಡುರೊಗರೆ ಹಾಗೂ 72.44 ಕೋಟಿ ರೂ. ಮೌಲ್ಯದ ಇತರೆ ವಸ್ತುಗಳನ್ನು ಜ್ತು ಮಾಡಿರುವುದಾಗಿ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.