ನವದೆಹಲಿ: ಚುನಾವಣಾ ವ್ಯವಸ್ಥೆ ಸುಧಾರಿಸುವ ಉದ್ದೇಶದೊಂದಿಗೆ ಚುನಾವಣಾ ಆಯೋಗ ಒಂದೊಂದೇ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಮತದಾರರಿಗೆ ಶೀಘ್ರವೇ ಡಿಜಿಟಲ್ ವೋಟರ್ ಐಡಿ ಒದಗಿಸುವ ಪ್ರಸ್ತಾವನೆಗೆ ಅನುಮತಿ ನೀಡಲು ಚಿಂತನೆ ನಡೆಸಿದೆ.
ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ಡಿಜಿಟಲ್ ಮಾದರಿಯ ಮತದಾರರ ಗುರುತಿನ ಚೀಟಿಯನ್ನು ವಿತರಿಸುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ. ಆದರೆ ಅಂತಿಮ ತೀರ್ಮಾನ ಇನ್ನೂ ತೆಗೆದುಕೊಂಡಿಲ್ಲ. ಈ ಬಗ್ಗೆ ಸಾರ್ವಜನಿಕರು, ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅಧಿಕೃತ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.
ಡಿಜಿಟಲ್ ವೋಟರ್ ಐಡಿ ಎಂದರೆ, ಮತದಾರ ತನ್ನ ಇಮೇಲ್ ಮೂಲಕ ತರಿಸಿಕೊಳ್ಳಬಹುದು. ಮೊಬೈಲ್ನಲ್ಲಿ ಇರಿಸಿಕೊಂಡು ಅಗತ್ಯ ಇದ್ದಾಗ ಬಳಸಿಕೊಳ್ಳಬಹುದು. ಹಾರ್ಡ್ ಕಾಪಿ ಮುದ್ರಿಸಿ ಮತದಾರರಿಗೆ ತಲುಪಿಸಲು ಸಮಯಾವಕಾಶ ಬೇಕು. ಆದರೆ ಡಿಜಿಟಲ್ ವೋಟರ್ ಐಡಿ ಹಾಗಲ್ಲ. ತತ್ಕ್ಷಣವೇ ಅವರಿಗೆ ಸಿಗುತ್ತದೆ. ಆಧಾರ್, ಪ್ಯಾನ್, ಚಾಲನಾ ಪರವಾನಗಿಗಳು ಹೇಗೆ ಡಿಜಿಟಲ್ ಸ್ವರೂಪ ಪಡೆದಿವೆಯೋ ಹಾಗೆಯೇ ಮತದಾರರ ಗುರುತಿನ ಚೀಟಿಯೂ ಡಿಜಿಟಲ್ ರೂಪದಲ್ಲಿ ಬರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..