ನ್ಯೂಸ್

ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಪೊಳ್ಳು ಭರವಸೆ: ವಿಜಯೇಂದ್ರ ಟೀಕೆ

ಬೆಂಗಳೂರು:
ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಪೊಳ್ಳು ಭರವಸೆಗಳನ್ನು ನೀಡಿದ್ದು, ಜನರು ಇದಕ್ಕೆ ಮಾರುಹೋಗುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿ ಅವರೇ ಪ್ರಧಾನಿ ಆಗಬೇಕು ಎಂದು ಜನರು ಬಯಸಿರುವಾಗ ಪ್ರನಾಳಿಕೆ ಬಗ್ಗೆ ಏಕೆ ಮಾತನಾಡಲಿ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಅವರು ನಾಯಕರು ಯಾರು? ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿಲ್ಲ. ಪರಿಸ್ಥಿತಿ ನೋಡಿದರೆ, ರಾಜ್ಯದಲ್ಲಿ ಕಾಂಗ್ರೆಸ್ 40 ಸೀಟು ದಾಟಲಾರದ ಸ್ಥಿತಿ ಇದೆ ಎಂದರು.
ಪ್ರನಾಳಿಕೆ ಎಂದು ಹೇಳುತ್ತಿದ್ದೀರಲ್ಲ? ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಆದರೂ ಯಾಕೆ ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಲು ಸಾಧ್ಯವಾಗಿಲ್ಲ ಎಂದು ಕೇಳಿದರು. ದೆಹಲಿಗೆ ಹೋಗಿ ಪ್ರತಿಭಟನೆ ಮಾಡುತ್ತೀರಿ. ಉಡಾೆ ಹೇಳಿಕೆ ಕೊಡ್ತೀರಿ. ನೀವು ಅಧಿಕಾರದಲ್ಲಿದ್ದಾಗ ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದ ಅವರು, ಸುಖಾ ಸುಮ್ಮನೆ ಹಣಕಾಸು ಸಚಿವರಿಗೆ ಪಂಥಾಹ್ವಾನ ನೀಡುವುದು ಸರಿಯಲ್ಲ ಎಂದರು.

ವಿನಾಶ ಕಲೇ ಬುದ್ದಿ
ಶಾಸಕ ಎಸ್.ಟಿ.ಸೋಮಶೇಖರ್ ವಿಷಯಕ್ಕೆ ಪ್ರತಿಕ್ರಿಯಿಸಿ, ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವುದು ಮುಂದೆ ಸಾಭೀತಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅಂತವರು ಇದ್ದಾಗ, ಅವರು ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದರು.