ಬೆಂಗಳೂರು:(Airbus aircraft for Indigo) ಇಂಡಿಗೋ ಸಂಸ್ಥೆಗೆ ಎಂಟು ಅತ್ಯಾಧುನಿಕ ಏರ್ಬಸ್ ವಿಮಾನಗಳನ್ನು ಒದಗಿಸಲು ಕ್ರೆಡೆಂಡೋ ಸಂಸ್ಥೆಗಳು ಜಂಟಿಯಾಗಿ ಘೋಷಿಸಿದೆ. ಇದು 328 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 2,750 ಕೋಟಿ ರೂ. ಅಧಿಕ) ಮೊತ್ತದ ಹಣಕಾಸು ಒಪ್ಪಂದವಾಗಿದೆ.
ಗುಜರಾತ್ನ ಗಾಂಧಿನಗರದಲ್ಲಿರುವ ಗಿಫ್ಟ್ ಸಿಟಿಯಲ್ಲಿ ಸ್ಥಾಪಿತವಾಗಿರುವ ಇಂಡಿಗೋ ಸಂಸ್ಥೆಯ ಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಇಂಟರ್ಗ್ಲೋಬ್ ಏವಿಯೇಷನ್ ಫೈನಾನ್ಷಿಯಲ್ ಸರ್ವಿಸಸ್ ಐಎಫ್ಎಸ್ಸಿ ಪ್ರೈವೇಟ್ ಲಿಮಿಟೆಡ್ ಮೂಲಕ ಈ ಮಹತ್ವದ ಆರ್ಥಿಕ ವಹಿವಾಟನ್ನು ಪೂರ್ಣಗೊಳಿಸಲಾಗಿದೆ.
ಇದು ಜಾಗತಿಕ ಮಟ್ಟದಲ್ಲೇ ಕ್ರೆಡೆಂಡೋ ಸಂಸ್ಥೆಯ ಸಾಲ ವಿಮೆಯನ್ನು ಪಡೆದುಕೊಂಡ ಪ್ರಪ್ರಥಮ ವಾಯುಯಾನ ಹಣಕಾಸು ವಹಿವಾಟಾಗಿದ್ದು, ಗಿಫ್ಟ್ ಐಎಫ್ಎಸ್ಸಿ ಗುತ್ತಿಗೆ ವ್ಯವಸ್ಥೆಯ (ಲೀಸಿಂಗ್ ಸ್ಟ್ರಕ್ಚರ್) ಮೂಲಕ ಕಾರ್ಯರೂಪಕ್ಕೆ ಬಂದ ಮೊದಲ ಇಸಿಎ-ಬೆಂಬಲಿತ ವಿಮಾನ ಸಾಲ ಒಪ್ಪಂದವಾಗಿದೆ. ಈ ಮೂಲಕ ದೇಶದ ನಾಗರಿಕ ವಾಯುಯಾನ ಹಣಕಾಸು ರಂಗದಲ್ಲಿ ಅತ್ಯಂತ ಮಹತ್ವದ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.
ಕ್ರೆಡೆಂಡೋ – ಎಕ್ಸ್ ಪೋರ್ಟ್ ಕ್ರೆಡಿಟ್ ಏಜೆನ್ಸಿಯ ಗ್ರೂಪ್ ಡೆಪ್ಯೂಟಿ ಸಿಇಒ ಹಾಗೂ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷ ಫ್ರಾಂಕ್ ವ್ಯಾನ್ವಿಂಗ್ ಮಾತನಾಡಿ, “ಈ ಬೃಹತ್ ವಹಿವಾಟು ಕ್ರೆಡೆಂಡೋ ಸಂಸ್ಥೆಗೆ ಅತ್ಯಂತ ಮಹತ್ವದ ಮೈಲಿಗಲ್ಲಾಗಿದೆ ಮತ್ತು ಬೆಲ್ಜಿಯಂ ದೇಶದ ವಾಯುಯಾನ ಉದ್ಯಮಕ್ಕೆ ಜಾಗತಿಕ ಬೆಂಬಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೈಗೊಂಡಿರುವ ವಿಶಾಲ ಯೋಜನೆ ಮೊದಲ ಯಶಸ್ವಿ ಹೆಜ್ಜೆಯಾಗಿದೆ ಎಂದರು.
ಇಂಡಿಗೋ ಸಂಸ್ಥೆಯ ಮುಖ್ಯ ವಿಮಾನ ಸ್ವಾಧೀನ ಮತ್ತು ಹಣಕಾಸು ಅಧಿಕಾರಿ ರಿಯಾಜ್ ಪೀರ್ಮೊಹಮ್ಮದ್ ಅವರು ಮಾತನಾಡಿ, “ಈ ಐತಿಹಾಸಿಕ ಹಣಕಾಸು ಒಪ್ಪಂದಕ್ಕಾಗಿ ಸಿಟಿ, ಕ್ರೆಡೆಂಡೋ ಮತ್ತು ಏರ್ಬಸ್ ಸಂಸ್ಥೆಗಳ ಜೊತೆ ಕೈಜೋಡಿಸಲು ನಮಗೆ ಅತ್ಯಂತ ಸಂತಸವಾಗಿದೆ ಎಂದು ಹೇಳಿದರು.
ಸಿಟಿ ಸಂಸ್ಥೆಯ ಭಾರತದ ಸಿಇಒ ಕೆ. ಬಾಲಸುಬ್ರಮಣಿಯನ್ ಪ್ರತಿಕ್ರಿಯಿಸಿ, “ಗಿಫ್ಟ್ ಸಿಟಿಯ ಮೂಲಕ ವಿಮಾನ ಗುತ್ತಿಗೆ ನೀಡುವುದನ್ನು ಭಾರತ ಸರ್ಕಾರವು ತನ್ನ ಸ್ಪಷ್ಟ ಆಡಳಿತಾತ್ಮಕ ನೀತಿ ಆದ್ಯತೆಯನ್ನಾಗಿ ಮಾಡಿಕೊಂಡಿದೆ. ಇದಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ವಿಶೇಷ ರಿಯಾಯಿತಿಗಳು ಹಾಗೂ ಪ್ರೋತ್ಸಾಹಕಗಳು ಭಾರತವನ್ನು ಜಾಗತಿಕ ವಿಮಾನ ಗುತ್ತಿಗೆಯ ಅತ್ಯಂತ ಆಕರ್ಷಕ ತಾಣವನ್ನಾಗಿ ರೂಪಿಸಲು ಮಹತ್ತರ ಕೊಡುಗೆ ನೀಡಿವೆ. ಭಾರತೀಯ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಅಂತಾರರಾಷ್ಟ್ರೀಯ ಇಸಿಎ-ಬೆಂಬಲಿತ ಅಗಾಧ ಹಣಕಾಸು ದ್ರವ್ಯತೆಯೊಂದಿಗೆ ಬೆಸೆಯುವ ಪ್ರಮುಖ ಜೀವನಾಡಿ ಮಾರ್ಗವನ್ನು ತೆರೆದಿದೆ ಮತ್ತು ಭಾರತದ ವಾಯುಯಾನ ಬೆಳವಣಿಗೆಯ ಮುಂದಿನ ಹಂತಕ್ಕೆ ಭದ್ರ ಬುನಾದಿ ಹಾಕಿದಂತಾಗಿದೆ ಎಂದರು