ಅನಂತನಾಗ್: ಬುಧವಾರ (ಸೆ.27) ಲಾರ್ಕಿಪೋರಾದಲ್ಲಿ ವಾಹನದೊಳಗೆ ಸ್ಫೋಟ ಉಂಟಾದ ಪರಿಣಾಮ ಎಂಟು ಜನರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ವರಿದಯಾಗಿದೆ.
ಇದನ್ನೂ ಓದಿ: ಸೆ. 29ರಿಂದ ವಾಷಿಂಗ್ಟನ್ನಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವ: ಶ್ರೀ ಶ್ರೀ ರವಿಶಂಕರ್ ಮುಂದಾಳತ್ವದಲ್ಲಿ ಸಾಂಸ್ಕೃತಿಕ ಒಲಿಂಪಿಕ್ಸ್
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಅನಂತನಾಗ್‌ನ ಲಾರ್ಕಿಪೋರಾದಲ್ಲಿ ವಾಹನದೊಳಗೆ ನಡೆದ ಸ್ಫೋಟದಲ್ಲಿ ನಾಲ್ಕು ಜನರಿಗೆ ಸುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಭಯೋತ್ಪಾದನೆಯ ಕೋನವಿಲ್ಲ. ಟಾಟಾ ಪಿಕಪ್ ಟ್ರಕ್‌ನೊಳಗಿನ ವೈಬ್ರೇಟರ್ ಸ್ಫೋಟಗೊಂಡ ಕಾರಣ ವಾಹನದೊಳಗಿದ್ದ ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹತ್ತಿರದ ಜಿಎಂಸಿ ಜಂಗ್ಲಮಂಡಿ ಅನಂತನಾಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ಚಟೋ ಕುಮಾರ್ (18), ಪರಮ್ ಜೀತ್ (22), ಭವನ್ ಕುಮಾರ್ (21), ಫಿಕಾನ್ (17), ಜಿತೇನ್ (21), ಟಿಟು ಕುಮಾರ್ (23), ಮತ್ಲೇಶ್ ಕುಮಾರ್ (19) ಮತ್ತು ಶಾನ್ ಕುಮಾರ್ (19) ಎಂದು ಗುರುತಿಸಲಾಗಿದೆ. ಗಾಯಗಳುಗಳೆಲ್ಲಾ ಬಿಹಾರದ ನಿವಾಸಿಗಳು ಎಂದು ಹೇಳಲಾಗಿದೆ,(ಏಜೆನ್ಸೀಸ್).