ನ್ಯೂಸ್

ಚಿತ್ರ ವಿ-ಚಿತ್ರ: ಗಿನ್ನೆಸ್ ದಾಖಲೆ ಸೇರಿದ ಎಗ್ ಟವರ್

ನವದೆಹಲಿ: ಸಾಮಾನ್ಯವಾಗಿ ಕೋಳಿಯ ಮೊಟ್ಟೆಯನ್ನು ಅದರ ಆಕಾರದ ಕಾರಣದಿಂದಾಗಿ ನೇರವಾಗಿ ನಿಲ್ಲಿಸುವುದು ಕಷ್ಟ. ಆದರೆ ಮಲೇಷ್ಯದ ಕೌಲಾಲಂಪುರದಲ್ಲಿರುವ ಯೆಮನ್ ಮೂಲದ ಮೊಹಮ್ಮದ್ ಮಕ್ಬುಲ್ ಎಂಬ ಇಪ್ಪತ್ತು ವರ್ಷದ ಯುವಕ ಒಂದರ ಮೇಲೆ ಒಂದರಂತೆ ಮೂರು ಮೊಟ್ಟೆಗಳನ್ನು ನೇರವಾಗಿ ನಿಲ್ಲಿಸಿದ್ದಲ್ಲದೆ, ಅವು ಐದು ಸೆಕೆಂಡ್​ಗಳಷ್ಟು ಕಾಲ ಕೆಳಕ್ಕೆ ಬೀಳದಂತೆ ನೋಡಿಕೊಂಡಿದ್ದಾನೆ.

ಈ ದಾಖಲೆಗಾಗಿ ಗಿನ್ನೆಸ್ ಸಂಸ್ಥೆಯು ಮುರಿಯದ, ಬಿರುಕು ಉಂಟಾಗಿರದಂಥ ಹೊರಕವಚಗಳನ್ನು ಹೊಂದಿರುವ, ತಾಜಾ ಮೊಟ್ಟೆಗಳನ್ನು ಬಳಸಬೇಕು ಎಂಬ ನಿಯಮ ವಿಧಿಸಿತ್ತು. ಈ ವಿಶಿಷ್ಟ ದಾಖಲೆ ಗಿನ್ನೆಸ್ ಪುಟದಲ್ಲಿ ಸೇರ್ಪಡೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.