ನ್ಯೂಸ್

ಕಾಳಜಿ ಕೇಂದ್ರಗಳಲ್ಲಿ ಮೊಟ್ಟೆ, ಬಾಳೆಹಣ್ಣು, ಚಪಾತಿ ಊಟ!

ಬೆಂಗಳೂರು : ಕಾಳಜಿ ಕೇಂದ್ರಗಳಲ್ಲಿ ಇನ್ನು ಮುಂದೆ ಪೌಷ್ಟಿಕ ಆಹಾರ ದೊರೆಯಲಿದೆ. ಈ ಸಂಬಂಧ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಕಾಳಜಿ ಕೇಂದ್ರದಲ್ಲಿರುವವರಿಗೆ ಗುಣಮಟ್ಟದ ಆಹಾರ ಸಿಗಬೇಕು. ಪೌಷ್ಟಿಕ ಭರಿತ ಆಹಾರವಾಗಿರಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಊಟ/ತಿಂಡಿಯ ಮೆನು ಬೆಳಗ್ಗೆ ಉಪಹಾರ: ಅವಲಕ್ಕಿ, ಉಪ್ಪಿಟ್ಟು, ಶಿರಾ(ಕೇಸರಿಬಾತ್) ಮತ್ತು ಕಾಫಿ/ಟೀ ಮಧ್ಯಾಹ್ನ ಊಟ: ಚಪಾತಿ/ಜೋಳದ ರೊಟ್ಟಿ, ಅನ್ನ-ಸಾಂಬಾರು, ಮೊಟ್ಟೆ, ಬಾಳೆಹಣ್ಣು ಸಂಜೆ: ಬಿಸ್ಕತ್ ಮತ್ತು ಟೀ/ಕಾಫಿ ರಾತ್ರಿ ಊಟ: ಚಪಾತಿ, 2 ನಮೂನೆ ಪಲ್ಯ, ಮೊಟ್ಟೆ ಹಾಗೂ ಬಾಳೆಹಣ್ಣು

ಕೇವಲ ಅನ್ನ, ಸಾಂಬಾರು ಕೊಡುವುದರಿಂದ ಸಂತ್ರಸ್ಥರ ಆರೋಗ್ಯ ಸಂವರ್ಧನೆ ಆಗುವುದಿಲ್ಲ. ಹಾಗಾಗಿ ಇನ್ನು ಮುಂದೆ ಮೊಟ್ಟೆ, ಬಾಳೆಹಣ್ಣು, ಚಪಾತಿ, ಅನ್ನ, ಸಾಂಬಾರು, ಟೀ ಮತ್ತು ಬಿಸ್ಕತ್ ನೀಡಲಾಗುತ್ತದೆ.  ಅಷ್ಟೇ ಅಲ್ಲ, ಕಾಳಜಿ ಕೇಂದ್ರಕ್ಕೆ ಬರುವ ನಿರಾಶ್ರಿತರಿಗೆ ಟವೆಲ್, ಪೇಸ್ಟ್, ಬ್ರಶ್ ಕೂಡ ನೀಡಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲೆಲ್ಲ ಕಾಳಜಿ ಕೇಂದ್ರಗಳನ್ನು ಗಂಜಿ ಕೇಂದ್ರ ಎಂದು ಕರೆಯಲಾಗುತ್ತಿತ್ತು. ಅಲ್ಲದೆ, ಅಲ್ಲೆಲ್ಲ ಗಂಜಿಯನ್ನೇ ನೀಡಲಾಗುತ್ತಿತ್ತು. ತರುವಾಯ ಅನ್ನ, ಸಾಂಬಾರಕ್ಕೆ ಈ ಕೇಂದ್ರಗಳು ಸೀಮಿತವಾಗಿದ್ದವು, ಇದನ್ನು ಗಮನಿಸಿದ ನಮ್ಮ ಸರ್ಕಾರ ನಿರಾಶ್ರಿಗರಿಗೆ ಪೌಷ್ಟಿಕ ಆಹಾರ ಒದಗಿಸಲಿದೆ ಎಂದರು.

ಹಿಂದಿ ಸಿದ್ದರಾಮಯ್ಯ ಸರ್ಕಾರದಲ್ಲಿ ಭೀಕರ ನೆರೆ, ಬರ ಪರಿಸ್ಥಿತಿ ಇಲ್ಲದೆ ಸಮೃದ್ಧಿಯಿಂದ ಇದ್ದಾಗಲೂ ಪೌಷ್ಟಿಕ ಆಹಾರ ನೀಡುವ ನಿರ್ಣಯ ತೆಗೆದುಕೊಂಡಿರಲ್ಲ. ನಮ್ಮ ಸರ್ಕಾರ ಅನೇಕ ಸವಾಲುಗಳ ನಡುವೆಯೂ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದೆ ಎಂದು ಅಶೋಕ್ ಹೇಳಿದರು.