The President, Shri Pranab Mukherjee gracing the function to commemorate the serving of 2 billion meals of the Akshaya Patra Foundation, at Bangalore, in Karnataka on August 27, 2016. The Governor of Karnataka, Shri Vajubhai Rudabhai Vala, the Chief Minister of Karnataka, Shri Siddaramaiah and the Union Minister for Human Resource Development, Shri Prakash Javadekar are also seen. 
ನ್ಯೂಸ್

ತುಳುವನ್ನು ಹೆಚ್ಚುವರಿ ಭಾಷೆಯಾಗಿಸುವ ಪ್ರಯತ್ನ: ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು ತುಳುವನ್ನು ರಾಜ್ಯದಲ್ಲಿ ಹೆಚ್ಚುವರಿ ಭಾಷೆಯನ್ನಾಗಿ ೋಷಿಸುವ ಪ್ರಯತ್ನ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೆಂಗಳೂರು ಕಂಬಳ ಉತ್ಸವದಲ್ಲಿ ಶನಿವಾರ ಸಂಜೆ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಅಶೋಕ್ ರೈ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಚರ್ಚಿಸಿದ್ದಾರೆ. ಅದರಂತೆ, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಹಿಂದಿನ ಸರ್ಕಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರೇ ಸಚಿವರಾಗಿದ್ದರು. ಹೆಚ್ಚುವರಿ ಭಾಷೆಯನ್ನು ಮಾಡುವ ಅವಕಾಶವಿತ್ತು. ಆದರೆ, ಅವರು ಮಾಡಿಲ್ಲ. ನಾವು ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.

ತುಳು ಮಾತೃ ಭಾಷೆಯನ್ನುಜನರು ಬಹಳ ಚೆನ್ನಾಗಿ ಅಳವಡಿಸಿಕೊಂಡಿದ್ದಾರೆ. ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆ ಗೊತ್ತಿದ್ದರು ತುಳುವನ್ನು ಮಾತನಾಡುತ್ತಾರೆ ಎಂದು ಶ್ಲಾಸಿದರು.

ಪ್ರತಿ ವರ್ಷ ನಡೆಸಿ:

ಕಂಬಳವನ್ನು ಬೆಂಗಳೂರಿನಲ್ಲಿ ಪ್ರತಿ ವರ್ಷ ಮುಂದುವರಿಸುವ ಕೆಲಸ ಮಾಡಬೇಕು. ಕರಾವಳಿ ಮಾತ್ರವಲ್ಲದೆ, ಬೆಂಗಳೂರಿನ ಜನರಿಗೆ ಮನರಂಜನೆಯಾಗಲಿದೆ. ವಿಶೇಷವಾಗಿ ನವೆಂಬರ್/ಡಿಸೆಂಬರ್‌ನಲ್ಲಿ ನಡೆಸುವಂತೆ ಸಲಹೆ ನೀಡಿದ ಮುಖ್ಯಮಂತ್ರಿಗಳು, ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವ ಜನರ ಕಲೆಯಾಗಿದೆ. ಸ್ಪೇನ್‌ನಲ್ಲಿ ಗೂಳಿ ಕಾಳಗಕ್ಕಿಮತ ಕೆಟ್ಟ ಕಲೆಯಲ್ಲ. ಈ ಕ್ರೀಡೆ ಉಳಿಸಿಕೊಂಡು ಹೋಗಬೇಕು. ಇದಕ್ಕಾಗಿ ನಾನು ಸುಗ್ರೀವಾಜ್ಞೆ ಹೊರಡಿಸಿದ್ದೆ ಎಂದರು.

ತಮಿಳುನಾಡಿನಲ್ಲಿ ಜಲ್ಲಿಕಟ್ಟುವಿನ ಮಾದರಿಯಲ್ಲಿ ಕೋಣಗಳಿಗೆ ನೊಗ ಹಾಕಿ ಓಡಿಸುತ್ತಾರೆ. ಮೊದಲು ಎಲ್ಲ ಜನರ ಕ್ರೀಡೆಯಾಗಿತ್ತು.ಈಗ ವರ್ಷಕ್ಕೆ ಒಂದು ಕೋಣ ಸಾಕಲು 15 ಲಕ್ಷ ರೂ. ಬೇಕೆಂತೆ ಹಾಗಾಗಿ ಶ್ರೀಮಂತರ ಕ್ರೀಡೆಯಾಗಿದೆ ಎಂದರು.

ಕಂಬಳವು ಕರಾವಳಿಯಲ್ಲಿ ವಿಶೇಷವಾಗಿ ಉಡುಪಿ ಮತ್ತು ಮಂಗಳೂರಿನ ಜಾನಪದ ಕಲೆಯಾಗಿದೆ. ಕರಾವಳಿಯ ಜಾನಪದ ಕಲೆಯನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವ ಪ್ರಯತ್ನ ಶ್ಲಾಘನೀಯ. ಕಂಬಳವು ಉಡುಪಿ ಮತ್ತು ಮಂಗಳೂರಿನಲ್ಲಿ ನಡೆಯಬೇಕು. ಬೆಂಗಳೂರಿನಲ್ಲಿ ಏಕೆಂದು ನಾನು ಪ್ರಶ್ನಿಸಿದೆ. ಆಗ ಅಶೋಕ್ ರೈ ಅವರು ಬೆಂಗಳೂರಿನಲ್ಲಿ ಲಕ್ಷಾಂತರ ಜನ ನೆಲೆಸಿದ್ದಾರೆ. ಅವರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದಿದ್ದರು. ಅವರ ನಿರೀಕ್ಷೆಯನ್ನು ಮೀರಿ ಆಶ್ಚರ್ಯವಾಗುವ ರೀತಿಯಲ್ಲಿ ಜನ ಸೇರಿದ್ದಾರೆ ಎಂದರು.

ಸರ್ಕಾರದ ಸಹಕಾರ ಕೋರಿದ ಖಾದರ್

ಕಂಬಳ ಮತ್ತು ಯಕ್ಷಗಾನವನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಯ ಎರಡು ಕಣ್ಣುಗಳಾಗಿವೆ. ಈ ಸಂಸ್ಕೃತಿಯನ್ನು ಜೀವಂತವಾಗಿಡಲು ಸಾಕಷ್ಟು ಶ್ರಮಿಸಿ ಇಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನು ಪ್ರತಿ ವರ್ಷ ನಿರಂತರವಾಗಿ ನಡೆಸಲು ಸರ್ಕಾರವು ಸಹಕಾರ ನೀಡಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಮನವಿ ಮಾಡಿದರು.

ಕಂಬಳವನ್ನು ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲದೆ, ಬೆಂಳೂರಿನಲ್ಲಿ ಬಿಂಬಿಸಿ ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಸ್ಕೃತಿಯನ್ನು ಪಸರಿಸಿದ್ದಾರೆ. ಹೀಗಾಗಿ ನಾನು ಇಲ್ಲಿಗೆ ಆಗಮಿಸಿದ ಸಂದರ್ಭದಲ್ಲಿ ‘ಇದು ತುಳುನಾಡಾ ಅಥವಾ ಬೆಂಗಳೂರಾ’ ಎಂಬ ಗೊಂದಲವಾಯಿತು ಎಂದರು.

ಕಂಬಳ ಉತ್ಸವವು ಕೇವಲ ಸ್ಪರ್ಧೆ ಮಾತ್ರವಲ್ಲ. ಯುವ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ವರ್ಗಾಯಿಸುವ ಕಾರ್ಯಕ್ರಮವಾಗಿದೆ. ಇಲ್ಲಿ ನೋಡುವ ವಿದ್ಯಾರ್ಥಿಗಳು ಮತ್ತು ಮಕ್ಕಳು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರೋತ್ಸಾಹ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಕಂಬಳ ಎಲ್ಲ ಜಾತಿ, ಧರ್ಮದ ಜನರನ್ನು ಸೇರಿಸುವ ವಾತಾವರಣ ನಿರ್ಮಾಣ ಮಾಡಲಿದೆ. ಇಲ್ಲಿ ಆಗುವ ಸಣ್ಣ ಪುಟ್ಟ ತೊಂದರೆಗಳನ್ನು ಪರಿಗಣಿಸದೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಕಾಶ್ ಶೆಟ್ಟಿ, ಯು.ಟಿ. ಖಾರ್, ಮಂಜುನಾಥ ಭಂಡಾರಿ, ಗುರುಕಿರಣ್, ಬಿ.ಆರ್. ಶೆಟ್ಟಿ, ಶಕುಂತಲಾ ಶೆಟ್ಟಿ, ಉಪೇಂದ್ರ ಶೆಟ್ಟಿ ಉಪಸ್ಥಿತರಿದ್ದರು.