ರಾಯಚೂರು 
ನ್ಯೂಸ್

ಶಿಕ್ಷಣ ಭಾಗಿದಾರರ ಸಮಾವೇಶ ರಾಯಚೂರನ್ನು ಶಿಕ್ಷಣ ಕಾಶಿ ಮಾಡುವುದೇ ನನ್ನ ಉದ್ದೇಶ-ಡಿಸಿ

ರಾಯಚೂರು ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಇಂದಿನ ಸಮಾವೇಶದಲ್ಲಿ ಮುಂದಿನ ೫ ವರ್ಷಕ್ಕೆ ಕ್ರಿಯಾ ಯೋಜನೆ ರೂಪಿಸುವ ಮೂಲಕ ರಾಯಚೂರು ಜಿಲ್ಲೆಯನ್ನು ಶಿಕ್ಷಣ ಕಾಶಿ ಮಾಡುವ ಗುರಿ ಹೊಂದಬೇಕು ಎಂದು ಜಿಲ್ಲಾಽಕಾರಿ ನಿತೀಶ ಕೆ. ತಿಳಿಸಿದರು.

ನಗರದ ಕೃಷಿ ವಿಶ್ವ ವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ಆಯುಕ್ತಾಲಯ ಕಲಬುರಗಿ, ಶಾಲಾ ಶಿಕ್ಷಣ ಇಲಾಖೆ ರಾಯಚೂರು, ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ವತಿಯಿಂದ ಆಯೋಜನೆ ಮಾಡಲಾಗಿದ್ದ ಶಿಕ್ಷಣ ಭಾಗಿದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು, ಶಿಕ್ಷಣದ ಗುಣಮಟ್ಟದ ಸುಧಾರಣೆ ಬೇರೆ ಜಿಲ್ಲೆಗೆ ಹೋಲಿಸಿದರೆ ಜಿಲ್ಲೆಯು ಇನ್ನೂ ಸುಧಾರಣೆಯಾಗಬೇಕಿದೆ,

ಜಿಲ್ಲೆಯಲ್ಲಿ ಶೇ ೫೦ ರಷ್ಟು ಶಿಕ್ಷಕರ ಕೊರತೆ ಇದೆ, ಅದನ್ನು ನೀಗಿಸಲು ಆತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿದೆ, ಈ ಎರಡು ದಿನದ ಸಮಾವೇಶದಲ್ಲಿ ಪಾಲ್ಗೊಂಡ ಶಿಕ್ಷಣ ಭಾಗಿದಾರರು, ಎನ್‌ಜಿಒಗಳು, ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆ ಅವಕಾಶ ದೊರೆತಿದೆ, ಮುಂದಿನ ೫ ವರ್ಷಕ್ಕೆ ಒಂದು ಕ್ರಿಯಾ ಯೋಜನೆ ತಯಾರಿಸಿಕೊಂಡು ಶಾಲೆಗಳಲ್ಲಿ ಶಿಕ್ಷಕರಿಂದಲೇ ಕಲಿಕಾ ಸಾಮರ್ಥ್ಯಕ್ಕೆ ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.

ಕಲ್ಯಾಣ ಕರ್ನಾಟಕಕ್ಕೆ ೩೭೧ ಜೆ ಕಲಂ ಈ ಭಾಗಕ್ಕೆ ಉತ್ತಮ ಅವಕಾಶ ನೀಡಿದೆ, ಪ್ರತಿ ತಾಲ್ಲೂಕಿನ ಶೈಕ್ಷಣಿಕ

ಗುಣಮಟ್ಟ ಸಾಧನೆ ಮಾಡಲು, ಬೇರೆ ಜಿಲ್ಲೆಯ ಮಕ್ಕಳೊಂದಿಗೆ ಸ್ಪರ್ಧೆಗೆ ಒಂದು ಮಾಡೆಲ್ ಕ್ರಿಯಾ ಯೋಜನೆ ಅಗತ್ಯವಿದೆ, ಸಾಕಷ್ಟು ಸಂಘಟನೆಗಳು ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಮತ್ತು ಅಪೌಷ್ಟಿಕತೆ ನಿವಾರಣೆ ಒತ್ತು ನೀಡುವಂತೆ ಹೇಳಿದೆ, ಸಾಕಷ್ಟು ಅನುದಾನವಿದೆ ಜೊತೆಗೆ ಮಾನವ ಸಂಪನ್ಮೂಲದ ಅಗತ್ಯವಿದೆ, ಎಲ್ಲಾ ವಿಷಯವಾರು ಒಳಗೊಂಡAತೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಳ ಮಾಡಲು, ಸಲಹೆ ಸಹಕಾರ ನೀಡಿ ಶಿಕ್ಷಣ ಕಾಶಿ ಮಾಡಲು ಮುಂದಾಗಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಎಸ್ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಕಳೆದ ಎರಡು ವರ್ಷಗಳಿಂದ ಶಿಕ್ಷಣ ಭಾಗೀದಾರರ ಸಮಾವೇಶ ನಡೆಸುತ್ತಿದ್ದು ಇದರಿಂದ ಮಕ್ಕಳ ಕಲಿಕೆಗೆ ಬೇಕಾಗಿರುವ ಪೂರ್ವ ತಯಾರಿಗೆ ಕ್ರಿಯಾ ಯೋಜನೆ ರೂಪಿಸಲಾ ಗುತ್ತಿದೆ, ಕಳೆದ ಎರಡು ವರ್ಷದಲ್ಲಿ ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸಮಾವೇಶ ನಡೆಸಲಾಗಿದೆ. ರಾಜ್ಯದಲ್ಲಿ ೫೭ ಸಾವಿರ ಶಿಕ್ಷಕರ ಕೊರತೆ ಇದೆ, ಈ ಭಾಗದಲ್ಲಿ ೧೫ ಸಾವಿರ ಕೊರತೆ ಇದೆ, ಜೊತೆಗೆ ಶಾಲಾ ಕಟ್ಟಡ, ನೀರಿನ ಸೌಲಭ್ಯ, ಶೌಚಾಲಯ, ಸೇರಿ ಹಲವು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದೇವೆ,

ಎಸ್‌ಎಸ್‌ಎಲ್‌ಯಲ್ಲಿ ಈ ಭಾಗದಲ್ಲಿ ಹೆಚ್ಚು -Àಲಿತಾಂಶ ಮಾಡಲು ಮೊದಲ ಕಾಪಿ ಮಾಡುವುದನ್ನು ತಡೆಗಟ್ಟಲು ವೆಬ್ ಕಾಸ್ಟಿಂಗ್ ಮಾಡಲಾಯಿತು, ನಂತರ ರಾಜ್ಯದಲ್ಲಿ ವಿಸ್ತೀರ್ಣ ಮಾಡಲಾಯಿತು ಎಂದರು. ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಯಿತು, ಆರಂಭದಲ್ಲಿ ೬೫ ಶಾಲೆಗಳು ಸೇರ್ಪಡೆ ಮಾಡಲಾಯಿತು, ೩-೬ ವರ್ಷ ಮಕ್ಕಳ ಕಲಿಕೆ ಹಂತ ಇದನ್ನು ಮತ್ತಷ್ಟು ಹೆಚ್ಚಿಸಲು ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಯುಕೆಜಿ ಆರಂಭಿಸಿದೆ, ಇದೀಗ ಎಲ್.ಕೆಜಿ ಯುಕೆಜಿಗೆ ೪೨ ಸಾವಿರ ಮಕ್ಕಳು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಮಲ್ಲಿಕಾರ್ಜುನ, ಕೃಷಿ ವಿವಿ ಕುಲಸಚಿವ ಗುರುರಾಜ ಸುಂಕದ್, ಡಯಟ್ ಪ್ರಾಚಾರ್ಯ ಆರ್.ಇಂದಿರಾ, ಪ್ರಥಮ -Ëಂಡೇಶನ್ ಮುಖ್ಯಸ್ಥರಾದ ಸುಮನ್, ಲತಾ ಕೋಟೆ, ಸೇರಿದಂತೆ ಅನೇಕರು ಇದ್ದರು. ---------