ಬಾಪೂಜಿ ಶಿಕ್ಷಣ ಸಂಸ್ಥೆಯಿಂದ ನಗರದ ಮಹಾದೇವಪ್ಪ ಅವರಿಗೆ ಬಾಪೂಜಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಶ್ರೀಪತಿ ಹಳಗುಂದ, ಬಿ. ಪಾಪಯ್ಯ, ಪವಿತ್ರಾ, ಶೈಲಾ ಮಡ್ಡಿ, ಹರೀಶ್, ರತ್ನಮ್ಮ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.  
ನ್ಯೂಸ್

ದೇಶದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರ ದೊಡ್ಡದು

ಶಿವಮೊಗ್ಗ: ವಿದ್ಯೆ ಜಗತ್ತಿನಲ್ಲಿ ಯಾರೂ ಕದಿಯಲಾರದ ವಸ್ತು. ವಿದ್ಯೆ ವಿವೇಕವನ್ನು ನೀಡುತ್ತದೆ. ವಿದ್ಯಾವಂತ ಪ್ರಪಂಚದ ಯಾವ ಮೂಲೆಗೆ ಹೋದರೂ ಗೌರವಕ್ಕೆ ಪಾತ್ರನಾಗುತ್ತಾನೆ ಎಂದು ಹೊಸನಗರದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಶ್ರೀಪತಿ ಹಳಗುಂದ ಹೇಳಿದರು.

ಶಿಕಾರಿಪುರದಲ್ಲಿ ಬಾಪೂಜಿ ಎಜುಕೇಷನಲ್ ಸೊಸೈಟಿ ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವ, ಬಾಪೂಜಿ ರತ್ನ ಪ್ರಶಸ್ತಿ ಪ್ರದಾನ, ಕ್ಯಾಲೆಂಡರ್ ಬಿಡುಗಡೆ ಹಾಗೂ ಪ್ರಥಮ ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಸಾಂಸ್ಕ ೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ನಮ್ಮ ಮತ್ತು ದೇಶದ ಪ್ರಗತಿ ಸಾಧ್ಯ. ಯಾವ ಕ್ಷೇತ್ರದಲ್ಲಿಯೇ ಆಗಲಿ ನಾವು ಸಾಧನೆ ಮಾಡಿ ಅಪೂರ್ವ ಸಾಧಕರಾಗಬೇಕು ಎಂದರು.

ಅತ್ಯುತ್ತಮ ಪುಸ್ತಕಗಳನ್ನು ಓದುವುದರಿಂದ ನಮ್ಮ ಮಸ್ತಕ ಪರಿಶುದ್ಧವಾಗುತ್ತದೆ. ಪುಸ್ತಕಗಳು ನಮಗೆ ಎಂದಿಗೂ ಶಿಕ್ಷಕರು, ಮಾರ್ಗದರ್ಶಕರಿದ್ದಂತೆ. ವಿದ್ಯಾರ್ಥಿಗಳಲ್ಲಿ ಒಳ್ಳೆಯ ಯೋಚನೆಗಳಿದ್ದರೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು. ಪಾಲಕರನ್ನು ಗೌರವದಿಂದ ಕಂಡರೆ ಸಮಾಜದಲ್ಲಿ ನಮಗೂ ಗೌರವ ಸಿಗುತ್ತದೆ ಎಂದು ತಿಳಿಸಿದರು.

ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಎ.ಬಿ.ಪವಿತ್ರಾ, ಈ ಸಮಾಜ ನಿಮ್ಮಿಂದ ಸಾಕಷ್ಟು ನಿರೀಕ್ಷೆ ಹೊಂದಿದೆ. ಅವರ ನಿರೀಕ್ಷೆಯಂತೆ ನೀವು ಮುಂದೆ ಬಂದು ಯಶಸ್ವಿಯಾಗಬೇಕು. ಯಶಸ್ಸು ಕೇವಲ ಮಾತಿನಿಂದ ಬರುವುದಿಲ್ಲ. ಸಾಧನೆಯಿಂದ ಬರುತ್ತದೆ. ತಂದೆ, ತಾಯಿ ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಈ ಮಣ್ಣಿನ ಸಂಸ್ಕೃತಿ ಪರಿಚಯ ಮಾಡಿಕೊಡಬೇಕು ಎಂದರು.

ಬಾಪೂಜಿ ಸಂಸ್ಥೆ ಅಧ್ಯಕ್ಷ ಬಿ.ಪಾಪಯ್ಯ ಮಾತನಾಡಿ, ನನ್ನ ಶೈಕ್ಷಣಿಕ ಕನಸು ಇಂದು ಬಾಪೂಜಿ ಶಿಕ್ಷಣ ಸಂಸ್ಥೆ ಮೂಲಕ ಈಡೇರಿದೆ. ಅಕ್ಷರದಾನ ಮಾಡುವ ಈ ಸಂಸ್ಥೆಯ ಬೆಳವಣಿಗೆ ನಮ್ಮ ನಿಮ್ಮೆಲ್ಲರ ಹಿರಿಮೆ ಎಂದರು.

ನಗರದ ಮಹಾದೇವಪ್ಪ ಅವರಿಗೆ ಬಾಪೂಜಿ ಸಂಸ್ಥೆಯಿಂದ ಬಾಪೂಜಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಂಗೋತ್ರಿ ಪ್ಯಾರಾ ಮೆಡಿಕಲ್ ಕಾಲೇಜಿನ ವೀರೇಂದ್ರಕುಮಾರ್, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಬಿಇಒ ಕೆ.ಬಿ.ಲೋಕೇಶಪ್ಪ, ಪಿಎಸ್‌ಐ ಶರತ್, ರತ್ನಮ್ಮ ಬಿ. ಪಾಪಯ್ಯ, ಮುಖ್ಯ ಶಿಕ್ಷಕ ರಾಘವೇಂದ್ರ, ಸಿದ್ದಪ್ಪ, ಪ್ರಾಚಾರ್ಯ ಮುಸ್ತಾ ಇತರರಿದ್ದರು.