ನ್ಯೂಸ್

ಟಿಇಟಿ ಪರೀಕ್ಷೆ ಮುಂದೂಡಲು ಸಚಿವರ ಆದೇಶ

ಬೆಂಗಳೂರು: ದಿನಾಂಕ‌12.07.2020 ರಂದು ನಿಗದಿಯಾಗಿದ್ದ‌ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (TET) ಮುಂದೂಡಲು ಶಿಕ್ಷಣ‌ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಆದೇಶಿಸಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ‌ ಜುಲೈ ತಿಂಗಳ ಭಾನುವಾರಗಳನ್ನು ಲಾಕ್ ಡೌನ್ ದಿನಗಳನ್ನಾಗಿ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಹಾಗೂ ತಾಂತ್ರಿಕ ಕಾರಣಗಳಿಗಾಗಿ ರಜಾ ದಿನಗಳನ್ನು ಹೊರತುಪಡಿಸಿ ಪರೀಕ್ಷೆ ನಡೆಸಲು‌ ಸಾಧ್ಯವಾಗದ ಹಿನ್ನೆಲೆಯಲ್ಲಿ‌ ಈ ನಿರ್ಧಾರಕ್ಕೆ ಬರಲಾಗಿದ್ದು, ಮುಂದಿನ ದಿನಗಳ ಪರಿಸ್ಥಿತಿಯನ್ನು ಆಧರಿಸಿ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಲಾಗುವುದೆಂದು ಸಚಿವರು ತಿಳಿಸಿದ್ದಾರೆ.