ನ್ಯೂಸ್

ಎಲ್‌ಬಿಎ ಅಂಕ ಪರಿಷ್ಕರಿಷಿ ಶಿಕ್ಷಣ ಇಲಾಖೆ ಆದೇಶ: ಕಡಿತ ಮಾಡಿದ ಅಂಕಗಳೆಷ್ಟು?

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ರಾಜ್ಯ ಪಠ್ಯಕ್ರಮ ಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದರುವ ಪಾಠ ಆಧಾರಿತ ಮೌಲ್ಯಾಂಕನ ಪ್ರಶ್ನೆಕೋಠಿಯನ್ನು (ಎಲ್‌ಬಿಎ) ಪರಿಷ್ಕರಿಸಿ ಶಾಲಾ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಸಿಎಸ್‌ಇಆರ್‌ಟಿ) ತಿದ್ದುಪಡಿ ಆದೇಶ ಹೊರಡಿಸಿದೆ.

ಈ ಮೊದಲು 1ರಿಮದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿ ವಾರ 25 ಅಂಕಗಳಿಗೆ ನಡೆಸಬೇಕಿದ್ದ ಪರೀಕ್ಷೆ ಅಂಕಗಳನ್ನು ಪರಿಷ್ಕರಣೆ ಮಾಡಲಾಗಿದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 15 ಅಂಕಗಳಿಗೆ ಮತ್ತು 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 20 ಅಂಕಗಳಿಗೆ ನಿಗದಿ ಮಾಡಿದೆ.

ಮರುಸಿಂಚನ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿರುವ ಜಿಲ್ಲೆಗಳು 6ರಿಂದ 10ನೇ ತರಗತಿವರೆಗೆ ಹಿಂದಿ ಭಾಷೆಯನ್ನು ಹೊರತುಪಡಿಸಿ 15 ಅಂಕಗಳಿಗೆ ಎಲ್‌ಬಿಎ ಪ್ರಶ್ನೆಕೋಠಿ ಮತ್ತು 5 ಅಂಕಗಳಿಗೆ ಮರುಸಿಂಚನ ಕಾರ್ಯಕ್ರಮ ಪ್ರಶ್ನೆಗಳನ್ನು ಪರಿಗಣಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ವಿವರಣೆಗಳು:

1ರಿಂದ 5ನೇ ತರಗತಿಯ ಪಾಠ ಆಧಾರಿತ ಮೌಲ್ಯಾಂಕನಕ್ಕೆ 10 ಅಂಕಗಳಿಗೆ ಲಿಖಿತ ಹಾಗೂ 5 ಅಂಕಗಳಿಗೆ ಮೌಖಿಕ ಸೇರಿ ಒಟ್ಟು 15 ಅಂಕಗಳಿಗೆ ವಸ್ತುನಿಷ್ಠ ಪ್ರಶ್ನೆಗಳು ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಂತೆ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿ ಘಟಿಕ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ಸ್ಯಾಟ್ಸ್‌ನಲ್ಲಿ ಅಪ್‌ಡೇಟ್ ಮಾಡಬೇಕು.

6 ಮತ್ತು 10ನೇ ತರಗತಿಯ ಪಾಠ ಆಧಾರಿತ ಮೌಲ್ಯಾಂಕನಕ್ಕೆ 20 ಅಂಕಗಳಿಗೆ ಎಲ್‌ಬಿಎ ಹಾಗೂ ವಿವರಣಾತ್ಮಕ ಪ್ರಶ್ನೆಗಳಿಗೆ ಘಟಕ ಪರೀಕ್ಷೆ ನಡೆಸಬೇಕು.

ಭಾಷಾ ವಿಷಯದಲ್ಲಿ ಪ್ರತಿ ಪಾಠ ಆಧಾರಿತ ಮೌಲ್ಯಾಂಕನಕ್ಕೆ ಒಂದು ಪಾಠ ಮತ್ತು ಒಂದು ಪದ್ಯವನ್ನು ಪರಿಗಣಿಸಬೇಕು

6ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಪ್ರತಿ ಮೂರು ಪಾಠಗಳಿಗೆ ಒಂದು ಪಾಠ ಆಧಾರಿತ ಮೌಲ್ಯಾಂಕನ ನಡೆಸಬೇಕು