ನ್ಯೂಸ್

ಈ ರಾಶಿಯವರಿಗೆ ಇಂದು ಅನಿರೀಕ್ಷಿತವಾಗಿ ಧನಲಾಭ: ನಿತ್ಯ ಭವಿಷ್ಯ

Webdesk - Ravikanth

ಮೇಷ: ಸಾರ್ವಜನಿಕವಾಗಿ ಮಹತ್ವದ ಯಶಸ್ಸು. ಕಗ್ಗಂಟು ಬಿಡಿಸುವ ಶಕ್ತಿ ನಿಮ್ಮಲ್ಲಿದೆ. ಬದ್ಧವಾಗಿರಿ. ಕುಟುಂಬದೊಂದಿಗೆ ಬೆರೆಯಿರಿ. ಶುಭಸಂಖ್ಯೆ: 8

ವೃಷಭ: ಅನಾರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ಸಂಗಾತಿಯೊಂದಿಗೆ ತಾಳ್ಮೆಯಿರಲಿ. ಆಸ್ತಿ ವಿಚಾರದ ಧೋರಣೆ ತರವಲ್ಲ. ಶುಭಸಂಖ್ಯೆ: 1

ಮಿಥುನ: ಮಕ್ಕಳ ವಿದ್ಯಾಭ್ಯಾಸಕ್ಕೆ ಪೋ›ತ್ಸಾಹ ನೀಡಿ. ಸಂಗಾತಿಯಿಂದ ಅನವಶ್ಯಕ ಧನವ್ಯಯ. ಹಳೇ ಸಮಸ್ಯೆ ಮರುಕಳಿಸಬಹುದು. ಶುಭಸಂಖ್ಯೆ: 7

ಕಟಕ: ದುಡುಕು ಸ್ವಭಾವವನ್ನು ನಿಯಂತ್ರಿಸಿಕೊಳ್ಳಿ. ಹಿರಿಯರ ಆಶೀರ್ವಾದ ಪಡೆಯಿರಿ. ಭವಿಷ್ಯದ ನಿರ್ಧಾರಗಳಲ್ಲಿ ದೃಢವಾಗಿರಿ. ಶುಭಸಂಖ್ಯೆ:9

ಸಿಂಹ: ಬದಲಾವಣೆಗೆ ಒಗ್ಗಿಕೊಳ್ಳುವ ಮನೋಭಾವವನ್ನು ಬೆಳೆಸಿಕೊಳ್ಳಿ. ಹಲವು ಕಾರ್ಯದೊತ್ತಡ. ಅನಾರೋಗ್ಯ. ಶುಭಸಂಖ್ಯೆ: 7

ಕನ್ಯಾ: ಹೊಸ ವಸ್ತು ಖರೀದಿಗೆ ನಿರ್ಧಾರ. ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ. ಸಾರ್ವಜನಿಕ ಕ್ಷೇತ್ರದಲ್ಲಿ ತಾಳ್ಮೆಯಿಂದ ವರ್ತಿಸಿ. ಶುಭಸಂಖ್ಯೆ: 1

ತುಲಾ: ನಿರೀಕ್ಷಿತ ಕಾರ್ಯ ಇಂದು ಸಂಪನ್ನವಾಗಲಿದೆ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ತಂದೆ ತಾಯಿಯ ಸಲಹೆ ಪಾಲಿಸಿ. ಶುಭಸಂಖ್ಯೆ: 4

ವೃಶ್ಚಿಕ: ಕಗ್ಗಂಟಾಗಿದ್ದ ಸಮಸ್ಯೆಗೆ ಹಿರಿಯರಿಂದ ಪರಿಹಾರ. ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಡಿ. ದಿನಾಂತ್ಯಕ್ಕೆ ಶುಭ. ಶುಭಸಂಖ್ಯೆ: 6

ಧನುಸ್ಸು: ಉದ್ಯೋಗದ ವಿಚಾರದಲ್ಲಿ ಆತ್ಮವಿಶ್ವಾಸದಿಂದ ವರ್ತಿಸಿ. ಕಲಾವಿದರಿಗೆ ವಿಶೇಷ ಅವಕಾಶ. ಅನಿರೀಕ್ಷಿತವಾಗಿ ಧನಲಾಭ. ಶುಭಸಂಖ್ಯೆ: 4

ಮಕರ: ಕುಟುಂಬದ ಕೆಲಸಗಳಲ್ಲಿ ವಿಫಲತೆ. ಜವಾಬ್ದಾರಿ ನಿರ್ವಹಿಸುವಲ್ಲಿ ಗೊಂದಲ. ದೊಡ್ಡ ಮೊತ್ತದ ನಷ್ಟ ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 7

ಕುಂಭ: ಪ್ರಾಮಾಣಿಕತೆಯ ಬಗ್ಗೆ ಸಹೋದ್ಯೋಗಿಗಳಿಗೆ ಅನುಮಾನ. ಪತ್ನಿಯೊಂದಿಗೆ ಭಿನ್ನಾಭಿಪ್ರಾಯ. ರಾಜಕೀಯದಲ್ಲಿ ಯಶ. ಶುಭಸಂಖ್ಯೆ: 6

ಮೀನ: ವ್ಯಾಪಾರದಲ್ಲಿ ಅಧಿಕ ಲಾಭ. ಕುಟುಂಬದ ವಿಚಾರದಲ್ಲಿ ಗೊಂದಲ ಸಲ್ಲದು. ಮನೆಯಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 1