ಹಾವೇರಿ: ಪ್ರಕಟಿತ ಕಥಾ ಸಂಕಲನಕ್ಕೆ ನೀಡುವ 2024ನೇ ಸಾಲಿನ ಹಂಸ ಕಥಾ ಪುರಸ್ಕಾರವು ಪ್ರವಿಣಕುಮಾರ ಜಿ. ಅವರ "ಎಡೆ' ಕೃತಿಗೆ ದೊರೆತಿದೆ ಎಂದು ಪುರಸ್ಕಾರದ ಸಂಚಾಲಕ ಬಸವರಾಜ ಜಾಡರ ತಿಳಿಸಿದ್ದಾರೆ.
ವಿಮರ್ಶಕ ಡಾ. ರವಿಕುಮಾರ ನೀಹ ಅಂತಿಮ ಸುತ್ತಿಗೆ ಬಂದಿದ್ದ ಆಯ್ದ ಆರು ಕೃತಿಗಳನ್ನು ಪರಾರ್ಮಶಿಸಿ "ಎಡೆ' ಸಂಕಲನವನ್ನು ಅಂತಿಮಗೊಳಿಸಿ ಹಂಸಕಥಾ ಪುರಸ್ಕಾರ -2024ಕ್ಕೆ ಆಯ್ಕೆ ಮಾಡಿದ್ದಾರೆ.