ನ್ಯೂಸ್

ನಟಿ ಯಾಮಿ ಗೌತಮ್​ಗೆ ಇಡಿ ಬುಲಾವ್​! 1.5 ಕೋಟಿ ರೂ. ಫೋರೆಕ್ಸ್​ ವ್ಯವಹಾರ ಪತ್ತೆ!

ಮುಂಬೈ : ಬಾಲಿವುಡ್​ ನಟಿ ಯಾಮಿ ಗೌತಮ್​​ಗೆ ಫಾರಿನ್​ ಎಕ್ಸ್​ಚೇಂಜ್ ವ್ಯವಹಾರದ ಸಂಬಂಧವಾಗಿ ವಿಚಾರಣೆ ನಡೆಸಲು ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ) ಸಮ್ಮನ್ಸ್​ ನೀಡಿದೆ. ಇಡಿಯ ಮುಂಬೈ ಕಛೇರಿಗೆ ಜುಲೈ 7 ರ ಬುಧವಾರ ಹಾಜರಾಗಬೇಕೆಂಬ ಸೂಚನೆ ಬಂದಿದೆ.

ಯಾಮಿ ಅವರ ಬ್ಯಾಂಕ್​ ಖಾತೆಯಲ್ಲಿ ಸುಮಾರು 1.5 ಕೋಟಿ ರೂ.ಗಳ ಫಾರಿನ್​ ಎಕ್ಸ್​​ಚೇಂಜ್​ ವ್ಯವಹಾರ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಫಾರಿನ್​ ಎಕ್ಸ್​ಚೇಂಜ್​ ಮ್ಯಾನೇಜ್​ಮೆಂಟ್​ ಆ್ಯಕ್ಟ್​​ನ(ಫೇಮಾ) ಉಲ್ಲಂಘನೆಯ ಆರೋಪದ ಮೇಲೆ ವಿಚಾರಣೆ ನಡೆಯುವುದು ಎನ್ನಲಾಗಿದೆ.

32 ವರ್ಷದ ಯಾಮಿ ಗೌತಮ್​ ಕಳೆದ ತಿಂಗಳಷ್ಟೇ ಚಿತ್ರ ನಿರ್ದೇಶಕ ಆದಿತ್ಯ ಧರ್​ರನ್ನು ಮದುವೆಯಾದರು. ಹಿಂದಿ ಚಿತ್ರ 'ವಿಕ್ಕಿ ಡೋನರ್'​ನಿಂದ ಬಾಲಿವುಡ್​ ಪ್ರವೇಶಿಸಿದ ಯಾಮಿ, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಇತ್ತೀಚಿನ ಸಿನಿಮಾ ಎಂದರೆ ಪುನೀತ್​ ಖನ್ನ ಅವರ 'ಗಿನ್ನಿ ವೆಡ್ಸ್​ ಸನ್ನಿ'. (ಏಜೆನ್ಸೀಸ್)