ನ್ಯೂಸ್

ಸಚಿವ ಪರಮೇಶ್ವರ್ ಸಂಸ್ಥೆ ಮೇಲೆ ಇ ಡಿ ದಾಳಿ : ಆರ್.ಅಶೋಕ್ ಸಂದೇಹ | Embarassment for the Government

ಬೆಂಗಳೂರು: ರನ್ಯಾರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಸೇರಿದ ಶಿಕ್ಷಣ ಸಂಸ್ಥೆಗೂ ನಂಟಿರುವಂತಿದೆ. ಇದೇ ಸಂದೇಹದಿಂದ ಜಾರಿ ನಿರ್ದೇಶನಾಲಯ ದಾಳಿ ಮಾಡಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಇ ಡಿ ದಾಳಿಯಲ್ಲಿ ಪರಮೇಶ್ವರ್ ಪಾತ್ರ ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕಾಗುತ್ತದೆ. ದಾಳಿ ಮಾಡಿರುವ ತಂಡದ ತನಿಖಾ ವರದಿ ಬಂದ ನಂತರ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.

ಈಗ ಪರಮೇಶ್ವರ್ ಅವರಿಗೆ ಸೇರಿದ ಮನೆ, ಸಂಸ್ಥೆಗಳ ಮೇಲೆ ಇ ಡಿ ದಾಳಿಯಾಗಿದೆ. ಮುಂದೆ ಇನ್ನೂ ಯಾರ‌್ಯಾರ ಮೇಲೆ ದಾಳಿಯಾಗುತ್ತದೋ ನೋಡಬೇಕು. ರನ್ಯಾರಾವ್ ಪ್ರಕರಣದಲ್ಲಿ ಇನ್ನೂ ಕೆಲವರ ನಂಟಿರುವ ಸಂಶಯವಿದೆ ಎಂದು ಹೇಳಿದರು.

ರನ್ಯಾರಾವ್ ವಿದೇಶದಿಂದ ಚಿನ್ನ ತಂದು ಇಲ್ಲಿನ ಹಲವು ಪ್ರಮುಖರಿಗೆ ಕೊಟ್ಟಿರುವ ಮಾಹಿತಿಯಿದೆ. ಈ ಹಣ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೂಡಿಕೆಯಾದ ಮಾಹಿತಿಯನ್ನು ಇ ಡಿಯವರು ಸಂಗ್ರಹಿಸಿ ದಾಳಿ ನಡೆಸಿರಬಹುದು ಎಂದು ಆರ್.ಅಶೋಕ್ ತರ್ಕಿಸಿದರು.