ನ್ಯೂಸ್

ಆ್ಯಮ್​ವೇ ಕಂಪನಿಗೆ ಸೇರಿದ 757 ಕೋಟಿ ರೂ. ಆಸ್ತಿ ಜಪ್ತಿ

ವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿ ಆ್ಯಮ್​ವೇ ಗೆ ಸೇರಿದ 757ಕೋಟಿ ರೂ.ಆಸ್ತಿಯನ್ನು ಜಾರಿ ನಿರ್ದೇಶನಾಲಯ ಸೋಮವಾರ ಜಪ್ತಿ ಮಾಡಿದೆ.

ನೇರ ಮಾರಾಟ ಸೋಗಿನಲ್ಲಿ ಬಹು ಹಗರಣ ನಡೆಸುತ್ತಿದೆ ಎಂಬ ಆರೋಪ ಕಂಪನಿ ಮೇಲಿದೆ. ಇನ್ನು ಅತ್ಯಧಿಕ ಬೆಲೆಗೆ ಮಾರಾಟದ ಆರೋಪವು ಕಂಪನಿ ವಿರುದ್ಧ ಕೇಳಿಬಂದಿದೆ.

ತಮಿಳುನಾಡಿನ ದಿಂಡಿಗಲ್​ ಜಿಲ್ಲೆಯಲ್ಲಿರುವ ಸಂಸ್ಥೆಯ ಯಂತ್ರ ತಯಾರಿಕಾ ಕಾರ್ಖಾನೆ, ವಾಹನಗಳು, ಹಾಗೂ ಸಂಸ್ಥೆಗೆ ಸೇರಿದ ಬ್ಯಾಂಕ್​ ಖಾತೆಗಳನ್ನು ಸಹ ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಈ ಹಿಂದೆ ತನಿಖಾ ಸಂಸ್ಥೆಯಿ 411.83 ಕೋಟಿ ರೂ. ಸ್ಥಿರ ಹಾಗೂ 345.94 ಕೋಟಿ ರೂ. ಚರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.