Watermelon: ಬೇಸಿಗೆಯಲ್ಲಿ ಸಿಗುವ ತಾಜಾ ರಸಪೂರಿತ ಹಣ್ಣುಗಳಲ್ಲಿ ಕಲ್ಲಂಗಡಿ ಕೂಡಾ ಒಂದು. ಈ ಹಣ್ಣು ಹೆಚ್ಚಿನ ನೀರಿನಾಂಶ, ಅಧಿಕ ಉತ್ಕುರ್ಷಣಗಳು ಹಾಗೂ ಪೋಷಕಾಂಶಗಳಿಂದ ಕೂಡಿದ ಹಣ್ಣಾಗಿದೆ. ಸಾಮಾನ್ಯವಾಗಿ ಹಲವಾರು ಜನರು ಈ ಹಣ್ಣು ತುಂಬಾ ಉಪಯುಕ್ತ ಎಂದು ಸೇವಿಸುತ್ತಾರೆ. ಆದರೆ, ಇದು ಕೆಲವೊಮ್ಮೆ ಅನಿರೀಕ್ಷಿತ ರೀತಿಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಕೂಡಾ ಬೀರಬಹುದು. ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಈ ಕೆಳಗೆ ತಿಳಿಸಲಾಗಿದೆ ನೋಡಿ..
ಕಲ್ಲಂಗಡಿ ರುಚಿಕರ, ಜಲಾಂಶದಾಯಕ ಮತ್ತು ಪೌಷ್ಟಿಕ ಹಣ್ಣಾಗಿದ್ದು, ಇದರಲ್ಲಿ ಶೇ. 92 ರಷ್ಟು ನೀರು, ವಿಟಮಿನ್ A, C, ಪೊಟ್ಯಾಸಿಯಮ್, ಮತ್ತು ಲೈಕೋಪೀನ್‌ನಂತಹ ಆಂಟಿ ಆಕ್ಸಿಡೆಂಟ್‌ಗಳಿವೆ. ಆದರೆ, ಅತಿಯಾದ ಸೇವನೆಯಿಂದ ಕೆಲವು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಕಲ್ಲಂಗಡಿಯಲ್ಲಿ ಫೈಬರ್ ಮತ್ತು ಫ್ರಕ್ಟೋಸ್ (ನೈಸರ್ಗಿಕ ಸಕ್ಕರೆ) ಹೆಚ್ಚಿರುತ್ತದೆ. ಇವುಗಳ ಅತಿಯಾದ ಸೇವನೆಯಿಂದ ಉಬ್ಬರ, ಅತಿಸಾರ, ಹೊಟ್ಟೆ ನೋವು, ಅಥವಾ ಕಿರಿಕಿರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದು ಅಧಿಕವಾದ ಪೊಟ್ಯಾಸಿಯಂನ್ನು ಹೊಂದಿರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಹಾಗೆಯೇ ಇದು ಹೃದಯ ಹಾಗೂ ಮೂತ್ರಪಿಂಡ ಕಾಯಿಲೆಗಳ ಮೇಲೆ ಪರಿಣಾಮ ಬೀರುತ್ತವೆ. ಅತಿಯಾದ ಸೇವನೆಯಿಂದ ಪಾಶ್ವವಾಯು, ಮಧುಮೇಹ ಟೈಪ್-1 ಮೂತ್ರಜನಕಾಂಗದ ಕೊರೆತೆಯನ್ನು ಉಂಟುಮಾಡುತ್ತದೆ.
ಕಲ್ಲಂಗಡಿಯ ಗ್ಲೈಸೆಮಿಕ್ ಇಂಡೆಕ್ಸ್ (GI) ಸಾಧಾರಣವಾದರೂ, ಅತಿಯಾಗಿ ತಿನ್ನುವುದರಿಂದ ರಕ್ತದ ಸಕ್ಕರೆ ಮಟ್ಟ ತಾತ್ಕಾಲಿಕವಾಗಿ ಏರಬಹುದು. ಇದರಲ್ಲಿ 74-80 ರಷ್ಟು ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುತ್ತದೆ. ಪ್ರೊಟೀನ್ ಹಾಗೂ ಅತ್ಯಾಧಿಕ ಕೊಬ್ಬಿನೊಂದಿಗೆ ಕಲ್ಲಂಗಡಿ ಸೇವಿಸುವುದರಿಂದ ಗ್ಲೂಕೋಸ್ ಹೀರಿಕೊಳ್ಳುವಿಕೆ ಕಡಿಮೆಯಾಗಿ, ರಕ್ತದಲ್ಲಿನ ಸಕ್ಕರೆ ಏರಿಳಿತ ಕಡಿಮೆಯಾಗಬಹುದು. ಮಧುಮೇಹಿಗಳಿಗೆ ಇದು ಸವಾಲಾಗಬಹುದು, ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
ಕಲ್ಲಂಗಡಿ ಹಣ್ಣಿನಲ್ಲಿ ಅತಿ ಹೆಚ್ಚು ನೀರಿನಾಂಶ ಇರುವುದರಿಂದ ದೇಹದಲ್ಲಿ ಸೋಡಿಯಂ ಮಟ್ಟ ಕಡಿಮೆಯಾಗಿ ಎಲೆಕ್ಟ್ರೋಲೈಟ್ ಅಸಮತೋಲನ ಉಂಟಾಗಬಹುದು. ಇದರಿಂದ ಅಧಿಕ ತಲೆನೋವು, ಆಯಾಸ, ಅಥವಾ ತಾವು ಮಾಡುತ್ತಿರುವ ಕೆಲಸಗಳ ಮೇಲೆ ಗೊಂದಲ ಉಂಟಾಗಬಹುದು. ಅಧಿಕವಾಗಿ ಸೇವನೆ ಮಾಡುವುದರಿಂದ ದೇಹದ ಆರೋಗ್ಯದ ಮೇಲೆ ದೀರ್ಘವಾಗಿ ಪರಿಣಾಮ ಬೀರಬಹುದು.
ಕೆಲವರು ಕಲ್ಲಂಗಡಿ ಸೇವನೆ ಮಾಡುವುದರಿಂದ ಅನೇಕ ತೊಂದರೆಗಳನ್ನು ಅನುಭವಿಸಬಹುದು. ಅದರೊಂದಿಗೆ ಅಲರ್ಜಿ ಲಕ್ಷಣಗಳಾದ ತುರಿಕೆ, ದದ್ದು, ಅಥವಾ ಗಂಟಲಿನ ಕಿರಿಕಿರಿ ಕಾಣಿಸಬಹುದು. ಆದರಿಂದ ಅಲರ್ಜಿ ಸಮಸ್ಯೆ ಇರುವವರು ಇವುಗಳ ಸೇವೆಯನ್ನು ಕಡಿಮೆ ಮಾಡುವುದು ಉತ್ತಮ.
ಕಲ್ಲಂಗಡಿ ಸೇವಿಸುವುದರಿಂದ ವಿಟಮಿನ್ A ಮತ್ತು C ಹೆಚ್ಚಿರುತ್ತದೆ. ಇವುಗಳ ಅತಿಯಾದ ಸೇವನೆಯಿಂದ ವಿಟಮಿನ್ A ಟಾಕ್ಸಿಸಿಟಿಯಿಂದ ತಲೆ ತಿರುಗುವಿಕೆ ಹಾಗೂ ವಿಟಮಿನ್ C ಯಿಂದ ಕಿಡ್ನಿ ಕಲ್ಲುಗಳ ಸಮಸ್ಯೆಗಳ ತೊಂದರೆಯನ್ನು ಅನುಭವಿಸಬಹದು.
ಕಲ್ಲಂಗಡಿಯ ಫ್ರಕ್ಟೋಸ್ ಅತಿಯಾಗಿ ಸೇವಿಸಿದರೆ, ಕ್ಯಾಲೋರಿಗಳು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗಬಹುದು.ಇದು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಅಧಿಕವಾದ ತೂಕದಿಂದ ದೇಹದಲ್ಲಿ ಕೊಬ್ಬು ಜಾಸ್ತಿಯಾಗಿ ದೈಹಿಕ ಸಮಸ್ಯೆಗನ್ನು ಅನುಭವಿಸಬೇಕಾಗುತ್ತದೆ.
ಇದನ್ನೂ ಓದಿ : BJP National President | ಬಿಹಾರ ಚುನಾವಣೆ ಘೋಷಣೆಗೂ ಮುನ್ನವೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇಮಕ ಸಾಧ್ಯತೆ!
ಆರೋಗ್ಯವಂತ ಮನುಷ್ಯನು ದಿನಕ್ಕೆ 1-2 ಕಪ್ ಕಲ್ಲಂಗಡಿ ಸೇವಿಸುವುದರಿಂದ ಆರೋಗ್ಯದಲ್ಲಿ ಸಮಸ್ಯೆ ಆಗುವುದಿಲ್ಲ. ಇದು ನೀರಿನಾಂಶ, ವಿಟಮಿನ್, ಆಂಟಿ ಆಕ್ಸಿಡೆಂಟ್ಗಳನ್ನು ಒದಗಿಸಿ ಅಡ್ಡಪರಿಣಾಮಗಳನ್ನು ತಡೆಯುತ್ತದೆ. ಮಧುಮೇಹಿಗಳು, ಜೀರ್ಣಕಾರ ಸಮಸ್ಯೆ ಇರುವವರು ಅಥವಾ ಅಲರ್ಜಿಯ ಸಮಸ್ಯೆ ಇರುವವರು ವೈದ್ಯರ ಸಲಹೆ ಒಪಡೆದು ಹಣ್ಣನ್ನು ಸೇವಿಸುವುದು ಉತ್ತಮವಾಗಿದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ