ನ್ಯೂಸ್

ಟೊಮ್ಯಾಟೊ ಸೇವಿಸಿದ್ರೆ ಜನ್ಮದಲ್ಲಿ ಅನಾರೋಗ್ಯ ಸಮಸ್ಯೆಯೇ ಬರುವುದಿಲ್ಲ...Health Tips

ಬೆಂಗಳೂರು: ಎಲ್ಲಾ ಮನೆಗಳ ಅಡುಗೆ ಕೋಣೆಗಳಲ್ಲಿ ಸಾಮಾನ್ಯವಾಗಿ ಬಳಸುವ ತರಕಾರಿಗಳಲ್ಲಿ ಟೊಮ್ಯಾಟೊ ಒಂದಾಗಿದೆ.  ಟೊಮ್ಯಾಟೊ ಎಲ್ಲಾ ರೀತಿಯ ಭಕ್ಷ್ಯಗಳಿಗೆ ವಿಶಿಷ್ಟವಾದ ರುಚಿ ನೀಡುತ್ತದೆ. ಅಡುಗೆಗೆ ರುಚಿ ನೀಡುವುದರ ಜತೆ ಆರೋಗ್ಯಕ್ಕೂ ಕೂಡಾ ಅನೇಕ ಪ್ರಯೋಜನಗಳನ್ನು ನೀಡುತ್ತದೆ.

ವಿಟಮಿನ್ ಸಿ, ಪೊಟ್ಯಾಸಿಯಮ್, ಫೋಲೇಟ್ ಮತ್ತು ವಿಟಮಿನ್-ಕೆ ಸಮೃದ್ಧವಾಗಿದೆ.  ಟೊಮೆಟೊದಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಅಂಶವು ರಕ್ತದೊತ್ತಡವನ್ನು ಹೆಚ್ಚಿಸುವುದಿಲ್ಲ.

ಟೊಮ್ಯಾಟೊದಲ್ಲಿ ಲೈಕೋಪೀನ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಇದ್ದು ಅದು ಬಿಪಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಪಧಮನಿಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹ ಉಪಯುಕ್ತವಾಗಿದೆ.

ಟೊಮ್ಯಾಟೊದರಲ್ಲಿರುವ ಲೈಕೋಪೀನ್ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿಯಾಗಿದೆ.

ಟೊಮ್ಯಾಟೊದಲ್ಲಿ ಬೀಟಾ ಕ್ಯಾರೋಟಿನ್ ಕೂಡ ಇದೆ. ಇದು ಪ್ರಾಸ್ಟೇಟ್ ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತದೆ. ಅಲ್ಲದೆ, ಟೊಮ್ಯಾಟೊವನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮ ಮತ್ತು ಕೂದಲು ಆರೋಗ್ಯಕರವಾಗಿರುತ್ತದೆ.

ಟೊಮ್ಯಾಟೊಗಳಲ್ಲಿನ ಪೋಷಕಾಂಶಗಳು 'ಫ್ರೀ ರಾಡಿಕಲ್'ಗಳನ್ನು ತಟಸ್ಥಗೊಳಿಸುವ ಮೂಲಕ ಜೀವಕೋಶದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆರೋಗ್ಯಕ್ಕೆ ಒಳ್ಳೆಯದೇ ಇರಲಿ, ಮಿತವಾಗಿ ಸೇವಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು.