ನ್ಯೂಸ್

ಪಾಕಿಸ್ತಾನದಲ್ಲಿ ಭೂಕಂಪ: ನಡುಗಿದ ದೆಹಲಿ- ಜನ ತತ್ತರ

ನವದೆಹಲಿ: ಪಾಕಿಸ್ತಾನದಲ್ಲಿ ಬುಧವಾರ ಮಧ್ಯಾಹ್ನ 12.58ಕ್ಕೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ. ಇಸ್ಲಾಮಾಬಾದ್, ಪೇಶಾವರ ಮತ್ತು ಲಾಹೋರ್‌ನಲ್ಲಿ ಕಂಪನವು ಭಯವನ್ನು ಸೃಷ್ಟಿಸಿದೆ. ಭಾರತದಲ್ಲೂ ದೆಹಲಿ ಸುತ್ತಮುತ್ತ ಭೂಮಿ ನಡುಗಿದೆ. ಆದರೆ ಯಾವುದೇ ರೀತಿಯಲ್ಲಿ ನಷ್ಟ, ಸಾವು ನೋವು ಸಂಭವಿಸಿಲ್ಲ.

ಭೂಕಂಪನದ ರಾಷ್ಟ್ರೀಯ ಕೇಂದ್ರವು ಪಾಕಿಸ್ತಾನದ ಕರೋಲ್ ಲಾಲ್‌ನಿಂದ ನೈಋತ್ಯಕ್ಕೆ 25 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಕೇಂದ್ರೀಕೃತವಾಗಿದೆ. ಕರೋರ್ ಲಾಲ್ ಪಟ್ಟಣದ ಬಳಿ ಮೇಲ್ಮೈಯಿಂದ 10 ಕಿ.ಮೀ ಆಳದಲ್ಲಿ ಬೃಹತ್​ ಕಲ್ಲುಬಂಡೆಗಳ ಚಲನವಲನದಿಂದ ಭೂಮಿ ಕಂಪನ ಉಂಟಾಗಿದೆ ಎಂದು ರಾಷ್ಟ್ರೀಯ ಭೂಕಂಪನ ಕೇಂದ್ರ ತಿಳಿಸಿದೆ.

ಭೂಕಂಪದ ಪರಿಣಾಮ ಉತ್ತರ ಭಾರತಕ್ಕೂ ತಟ್ಟಿದೆ ಎಂದು ವಿವರಿಸಿದೆ. ದೆಹಲಿ-ಎನ್‌ಸಿಆರ್ ಪ್ರದೇಶ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ, ಲಘು ಕಂಪನದಿಂದ ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ.

ಭಾರತ, ಪಾಕಿಸ್ತಾನ ಸೇರಿದಂತೆ ಅಫ್ಘಾನಿಸ್ತಾನದಲ್ಲಿ ಭೂಮಿ ಕಂಪಿಸಿದೆ. ಪಾಕ್​ನ ಕರೋರ್ ಲಾಲ್, ಫತೇಪುರ್, ಲೆಯ್ಯಾ, ಬಸ್ತಿ ಸರ್ಘಾನಿ, ದೇರಾ ಇಸ್ಮಾಯಿಲ್ ಖಾನ್, ಖಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿನ ಮನೆಗಳು ಧ್ವಂಸಗೊಂಡಿವೆ.