ನ್ಯೂಸ್

ಜಮ್ಮು-ಕಾಶ್ಮೀರ: ದೋಡಾ ಪ್ರದೇಶದಲ್ಲಿ ಎರಡೆರಡು ಬಾರಿ ಭೂಕಂಪನ

ಜಮ್ಮು ಮತ್ತು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಸೋಮವಾರ ಮಧ್ಯಮ ತೀವ್ರತೆಯಲ್ಲಿ ಎರಡು ಬಾರಿ ಭೂಕಂಪನ ಸಂಭವಿಸಿದೆ. ಆದರೆ ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯ ವರದಿಗಳು ಬಂದಿಲ್ಲ.

ನ್ಯಾಷನಲ್ ಸೆಂಟರ್ ಫಾರ್ ಸೆಸ್ಮಾಲಜಿ (NCS) ಪ್ರಕಾರ, ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯ ಮೊದಲ ಭೂಕಂಪನವು ಬೆಳಗ್ಗೆ 5.38 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾ ಪ್ರದೇಶದಲ್ಲಿ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.

ಏತನ್ಮಧ್ಯೆ, ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆಯ ಎರಡನೇ ಭೂಕಂಪನವು ಎಂಟು ಕಿಲೋಮೀಟರ್ ಆಳದಲ್ಲಿ ಬೆಳಗ್ಗೆ 5.43ಕ್ಕೆ ಸಂಭವಿಸಿದ್ದು ಮತ್ತೊಮ್ಮೆ ದೋಡಾ ಪ್ರದೇಶ ಭೂಕಂಪನದ ಕೇಂದ್ರಬಿಂದುವಾಗಿದೆ.

ತಜ್ಱರ ಪ್ರಕಾರ, ಕಾಶ್ಮೀರವು ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಹಿಂದೆಯೂ ಅಲ್ಲಿ ಭೂಕಂಪನಗಳು ಹಾನಿಯನ್ನುಂಟು ಮಾಡಿದ್ದವು. 2005 ರಲ್ಲಿ, 7.6 ಮ್ಯಾಂಗಿಟ್ಯೂಡ್ ಭೂಕಂಪನವು ನಿಯಂತ್ರಣ ರೇಖೆಯ (LoC) ಎರಡು ಬದಿಗಳಲ್ಲಿ ಸಂಭವಿಸಿದ್ದು, 80,000 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು.