ನ್ಯೂಸ್

VIDEO: ಶಾರ್ಕ್​ ಮೀನನ್ನು ಹೊತ್ತ ಹಕ್ಕಿ ಹಾರುತಿದೆ ನೋಡಿ...

vinaymk1969

ಸಾಮಾನ್ಯವಾಗಿ ಹದ್ದುಗಳು ಹಾವುಗಳನ್ನು ಹಿಡಿದು ಹಾರುವ ದೃಶ್ಯಗಳನ್ನು ನೋಡಿಯೇ ಇರುತ್ತೇವೆ. ಆದರೆ ಅಮೆರಿಕದ ದಕ್ಷಿಣ ಕೆರೊಲಿನದ ಮೈರ್ಟಲ್ ಬೀಚ್ ಬಳಿ ಬೃಹತ್ ಗಾತ್ರದ ಹಕ್ಕಿಯೊಂದು ಶಾರ್ಕ್ ಮೀನನ್ನು ಹೊತ್ತೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಕೆಲ್ಲಿ ಬರ್ಬೆಜ್ ಎನ್ನುವವರು ಈ ಅತಿ ಅಪರೂಪದ ದೃಶ್ಯವನ್ನು ಸೆರೆಹಿಡಿದಿದ್ದು, ತಮ್ಮ ಫೇಸ್​ಬುಕ್, ಟ್ವಿಟರ್ ಖಾತೆಗಳಲ್ಲಿ ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ವೈರಲ್ ಆಗಿರುವ ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟಿದ್ದು, ಸಾವಿರಾರು ಕಾಮೆಂಟ್​ಗಳು ಬಂದಿವೆ. ಹಕ್ಕಿಯು ಶಾರ್ಕ್ ಮೀನನ್ನು ಕಾಲುಗಳಲ್ಲಿ ಸಿಕ್ಕಿಸಿಕೊಂಡು ಹೊತ್ತೊಯ್ಯುತ್ತಿರುವ ದೃಶ್ಯ ನೆಟ್ಟಿಗರಲ್ಲಿ ಬೆರಗು ಮೂಡಿಸಿದೆ.