ಮರಿಯಮ್ಮನಹಳ್ಳಿ ಸಮೀಪದ 114 ಡಣಾಪುರ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ಎಚ್.ಮಲ್ಲೇಶ್ ಚಾಲನೆ ನೀಡಿದರು. ಉಪಾಧ್ಯಕ್ಷೆ ಪದ್ಮಾವತಿ ನಾಗರಾಜ್, ಸದಸ್ಯರಾದ ದಾಕ್ಷಾಯಿಣಿ ಮಂಜುನಾಥ, ಜ್ಯೋತಿ ಯಮನೂರಪ್ಪ, ಪಿಡಿಒ ನೀರಳ್ಳಿ ಮಂಜುನಾಥ ಇತರರಿದ್ದರು. 
ನ್ಯೂಸ್

ಪ್ರತಿ ಮನೆಗೆ ಶುದ್ಧ ನೀರು ಪೂರೈಕೆ

ನರೇಶ್ ಕುಮಾರ್

ಮರಿಯಮ್ಮನಹಳ್ಳಿ: ಡಣಾಪುರ ಗ್ರಾಪಂ ವ್ಯಾಪ್ತಿಯ ಜನರಿಗೆ ನಿರಂತರ ನೀರಿನ ವ್ಯವಸ್ಥೆ ಕಲ್ಪಿಸಲು ಜೆಜೆಎಂ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷ ಎಚ್.ಮಲ್ಲೇಶ್ ಹೇಳಿದರು.

ಸಮೀಪದ 114 ಡಣಾಪುರ ಗ್ರಾಮದ ಪುಟ್ಟರಾಜ ಗಾವಯಿಗಳ ಸಮುದಾಯ ಭವನದ ಬಳಿ ಬುಧವಾರ 1.5 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಜಲಜೀವನ್ ಮಿಷನ್ ಅಡಿಯಲ್ಲಿ ಗಾಳೆಮ್ಮನಗುಡಿ, ವ್ಯಾಸನಕೆರೆ ಹಾಗೂ ಡಣಾಪುರ ಗ್ರಾಮಗಳಲ್ಲಿ ಪ್ರತಿ ಮನೆಗೆ ಹೊಸ ನಳ-ಪೈಪ್‌ಲೈನ್ ಅಳವಡಿಸಿ ಶುದ್ಧ ನೀರು ಪೂರೈಸಲಾಗುವುದು. ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರಿಗೆ ಬೇಕಾದ ಮೂಲಸೌಕರ್ಯಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪಿಡಿಒ ನೀರಳ್ಳಿ ಮಂಜುನಾಥ, ಉಪಾಧ್ಯಕ್ಷೆ ಪದ್ಮಾವತಿ ನಾಗರಾಜ್, ಸದಸ್ಯರಾದ ದಾಕ್ಷಾಯಿಣಿ ಮಂಜುನಾಥ, ಜ್ಯೋತಿ ಯಮನೂರಪ್ಪ, ದಾಸಪ್ಪ, ಮಂಜಯ್ಯ ಸ್ವಾಮಿ, ಬಸವರಾಜ, ಎಚ್.ದುರ್ಗಮ್ಮ ಯಮನೂರಪ್ಪ, ಪಾರ್ವತಮ್ಮ ಹನುಮಂತಪ್ಪ, ಷಣ್ಮುಖ, ಛತ್ರಪತಿ, ಶ್ರೀನಿವಾಸ್, ಪ್ರೇಮನಂದಯ್ಯ ಇತರರಿದ್ದರು.