ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ವಿತರಣೆಗೆ ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಕುರಿತು(E-Swattu issuance; guidance to resolve confusion) ಸರ್ಕಾರ ಸುತ್ತೋಲೆ(Circular) ಹೊರಡಿಸಿದೆ.
ಗ್ರಾ.ಪಂ.ಗಳಲ್ಲಿ ಉಂಟಾದ ಗೊಂದಲಗಳಿಗೆ ಪರಿಹಾರದ ಮಾರ್ಗದರ್ಶನ ಹಾಗೂ ತಪ್ಪಾದ/ ಅಪೂರ್ಣ ಮಾಹಿತಿಯುಳ್ಳ ಹಕ್ಕುಪತ್ರಗಳ ತಿರಸ್ಕಾರಕ್ಕೆ ಸೂಚನೆ ನೀಡಲಾಗಿದೆ.
ಗ್ರಾಪಂ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಪ್ರಕರಣ 94-ಸಿ, 94-ಸಿಸಿ ಹಾಗೂ 94-ಡಿ ರಡಿಯಲ್ಲಿ ನಿವೇಶನ ಮತ್ತು ಮನೆ ನೀಡುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9 ಮತ್ತು 11-ಎ ನೀಡಲು ಕೈಗೊಳ್ಳಬೇಕಾದ ಪ್ರಕ್ರಿಯೆಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
1. ಕಂದಾಯ ಇಲಾಖೆಯ ತಂತ್ರಾಂಶದ ಮೂಲಕ ತಹಸೀಲ್ದಾರರಿಂದ ಸ್ವೀಕರಿಸಲಾದ ಹಕ್ಕು
ಪತ್ರಗಳಲ್ಲಿ ತಪ್ಪಾದ/ಅಪೂರ್ಣ (ವಿಸ್ತೀರ್ಣ, ಚಕ್ಕುಬಂಧಿ ಇತ್ಯಾದಿ) ಮಾಹಿತಿಯಿದ್ದಲ್ಲಿ, ಅಂತಹ ಹಕ್ಕು ಪತ್ರಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಪಿಐಡಿ ತಯಾರಿಸಿದ್ದು, ಇ-ಸ್ವತ್ತು ತಂತ್ರಾಂಶದಲ್ಲಿ ತಿರಸ್ಕರಿಸುವುದು.
2. ತಪ್ಪಾದ/ಅಪೂರ್ಣ ಮಾಹಿತಿಯುಳ್ಳ ಹಕ್ಕುಪತ್ರಗಳಿಗೆ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಪಿಐಡಿಗಳನ್ನು ಸೃಜಿಸಿರುವ ಸಂದರ್ಭಗಳಿದ್ದಲ್ಲಿ ಎಕ್ಸ್‌ಎಂಎಲ್ ಫೈಲ್‌ಗಳನ್ನು ರಿಜಿಕ್ಟ್ ಮಾಡುವುದು.
3. ತಹಸೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳ ವಿವರಗಳನ್ವಯ ಈಗಾಗಲೇ ಗ್ರಾಮ ಪಂಚಾಯಿತಿಯ ಪಂಚತಂತ್ರ ತಂತ್ರಾಂಶದಲ್ಲಿ ಫಲಾನುಭವಿಯ ವಿವರಗಳು ಇದ್ದಲ್ಲಿ, ತಹಸೀಲ್ದಾರರಿಂದ ಸ್ವೀಕರಿಸಲಾದ ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ ಪಿಐಡಿ ಸೃಜಿಸದೆ, ಪಂಚತಂತ್ರ ತಂತ್ರಾಂಶದಲ್ಲಿನ ಆಸ್ತಿಯ ಪಿಐಡಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡುವುದು. ಈ ಪ್ರಕರಣದಲ್ಲಿ ನೋಂದಣಿಯ ಅಗತ್ಯ ಇರುವುದಿಲ್ಲ.
4. ಪಂಚತಂತ್ರ ತಂತ್ರಾಂಶದಲ್ಲಿನ ಮಾಹಿತಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡದೆಯೇ, ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ ಪಿಐಡಿ ಸೃಜಿಸಲಾಗಿದ್ದರೆ, ಪಂಚತಂತ್ರದಲ್ಲಿನ ಹಳೆಯ ಪಿಐಡಿಯನ್ನು ನಿಷ್ಕಿಯಗೊಳಿಸುವುದು.
5. ಪಂಚತಂತ್ರ ತಂತ್ರಾಂಶದಲ್ಲಿನ ಮಾಹಿತಿಗೆ ಹಕ್ಕು ಪತ್ರವನ್ನು ಜೋಡಣೆ ಮಾಡದೆಯೇ ಹಕ್ಕು ಪತ್ರಗಳಿಗೆ ಹೊಸದಾಗಿ ಇ-ಸ್ವತ್ತು ತಂತ್ರಾಂಶದಲ್ಲಿ ಪಿಐಡಿ ಸೃಜಿಸಲಾಗಿದ್ದು ಮತ್ತು ಪಂಚತಂತ್ರ ತಂತ್ರಾಂಶದಲ್ಲಿನ ಪಿಐಡಿಯನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವರ್ಗಾವಣೆಗೆ ಒಳಪಡಿಸಿದ್ದರೆ, ಅಂತಹ ಸಂದರ್ಭದಲ್ಲಿ ಹಕ್ಕು ಪತ್ರಗಳನ್ವಯ ಸೃಜಿಸಲಾಗಿರುವ ಪಿಐಡಿಯ ಎಕ್ಸ್‌ಎಂಎಲ್ ೈಲ್‌ಗೆ ಗ್ರಾಮ ಪಂಚಾಯಿತಿಯಿಂದ ನೋಟೀಸ್ ಸೃಜಿಸದೆ ಎಕ್ಸ್ ಎಂಎಲ್ ೈಲ್ ಅನ್ನು ರಿಜೆಕ್ಟ್ ಮಾಡಬೇಕು. ಒಂದು ವೇಳೆ ನೊಟೀಸ್ ಸೃಜಿಸಿ 15 ದಿನಗಳ ಮ್ಯುಟೇಷನ್ ಅವಧಿಯಲ್ಲಿದ್ದರೆ ಅಂತಹ ಪಿಐಡಿಗಳನ್ನು ಅನುಮೋದಿಸದೆ ಫಲಾನುಭವಿಗಳ ಮಾಹಿತಿಯನ್ನು
ತಹಸೀಲ್ದಾರರಿಗೆ ಮುಂದಿನ ಸೂಕ್ತ ತಿದ್ದುಪಡಿಗೆ ವರ್ಗಾಯಿಸುವುದು.
6. ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಪ್ರಕರಣ 94-ಡಿ ಅಡಿಯಲ್ಲಿ ವಾಸದ ಮನೆಗಳಿಗೆ ಹಾಗೂ ಹೊಂದಿಕೊಂಡಿರುವ ಜಾಗಗಳಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿರುತ್ತದೆ. ಪ್ರಸ್ತುತ, ವಿತರಣೆ ಮಾಡಲಾಗಿರುವ ಹಕ್ಕು ಪತ್ರಗಳಲ್ಲಿ ನಿವೇಶನದ ಮಾಹಿತಿ ಮಾತ್ರ ಲಭ್ಯವಿರುವುದರಿಂದ ಕಾವೇರಿ ತಂತ್ರಾಂಶದಿಂದ ಗ್ರಾಮ ಪಂಚಾಯಿತಿಗಳು ಫಲಾನುಭವಿ ಹೆಸರಿಗೆ ಸ್ವೀಕರಿಸುವ ಎಕ್ಸ್ ಎಂಎಲ್ ೈಲ್ ಗಳನ್ನು ಮ್ಯುಟೇಷನ್ ಪ್ರಕ್ರಿಯೆಗೆ ಒಳಪಡಿಸಿ ಪಿಡಿಒಗಳು 15 ದಿನಗಳ ನೋಟೀಸ್ ಅವಧಿಯಲ್ಲಿ ಹಕ್ಕು ಪತ್ರಗಳಲ್ಲಿನ ವಿವರಗಳಿಗೆ ಅನುಗುಣವಾಗಿ
ಮನೆಗಳ ಸ್ಥಳ ಪರಿಶೀಲನೆ ಮಾಡಿ ಕಟ್ಟಡಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಹಜರಿನೊಂದಿಗೆ ಲಿಖಿತವಾಗಿ ಫಲಾನುಭವಿಯಿಂದ ಪಡೆದು ಫಲಾನುಭವಿಯ ಹೆಸರನ್ನು ಇ-ಸ್ವತ್ತು ತಂತ್ರಾಂಶದಲ್ಲಿ ಅನುಮೋದನೆ ಮಾಡಿದ ನಂತರ ಪುನಃ ಮ್ಯಾನ್ಯುಯಲ್ ಮ್ಯುಟೇಷನ್ ಮಾಡುವ ಮೂಲಕ (ಸ್ವತ್ತಿನ ಪ್ರಕಾರ) ನಿವೇಶನದ ವಿವರದೊಂದಿಗೆ ಕಟ್ಟಡದ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂದೀಕರಿಸುವ ಮೂಲಕ ಫಲಾನುಭವಿಯ ಹೆಸರಿಗೆ ನಮೂನೆಗಳ ವಿತರಣೆಗೆ ಕ್ರಮ ವಹಿಸುವುದು.
7. ಹಕ್ಕು ಪತ್ರಗಳ ಷರತ್ತುಗಳನ್ವಯ ಫಲಾನುಭವಿಗಳು ಪಡೆದ ಆಸ್ತಿಯನ್ನು 15 ವರ್ಷಗಳ ಅವಧಿಯವರಗೆ ಪರಭಾರೆ ಮಾಡದ ಅಂಶವನ್ನು ಇ-ಸ್ವತ್ತು ತಂತ್ರಾಂಶದ ಹಕ್ಕುಗಳು ಮತ್ತು ಋಣಗಳು ಕಾಲಂನಲ್ಲಿ ಸ್ವಯಂ ಚಾಲಿತವಾಗಿ ದಾಖಲಾಗಿರುವುದನ್ನು ಹಾಗೂ ಇ-ಸ್ವತ್ತು ನಮೂನೆಗಳಲ್ಲಿ ದಾಖಲಾಗಿರುವುದರ ಬಗ್ಗೆ ಪಿಡಿಒಗಳು ದೃಢೀಕರಿಸಿಕೊಳ್ಳುವುದು ಎಂದು ಸೂಚನೆ ನೀಡಲಾಗಿದೆ.
ಅಲ್ಲದೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಸೇರಿದ ಕಟ್ಟಡ/ನಿವೇಶನ ಪಿಟಿಸಿಎಲ್ ವ್ಯಾಪ್ತಿಗೆ
ಒಳಪಡುವುದರಿಂದ ಪಿಟಿಸಿಎಲ್ ಕಾಯ್ದೆಯಂತೆ ಕ್ರಮ ವಹಿಸಬೇಕು ಎಂದು ಎಲ್ಲ ಜಿಪಂ ಸಿಇಒ ಮತ್ತಿತರ ಅಧೀನಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.