ಪಾಕ್ ವಿರುದ್ಧ ಯುದ್ಧದ (ಆಪರೇಷನ್ ಸಿಂಧೂರ್) ಸಮಯದಲ್ಲಿ ಅಮೆರಿಕ ನಿರ್ಮಿತ ಎಫ್ -16 ಮತ್ತು ಚೀನಾದ ಜೆಎಫ್ -17 ಸೇರಿದಂತೆ 8-10 ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ನಾಶಪಡಿಸಲಾಗಿದೆ ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಎಪಿ ಸಿಂಗ್ ಬಹಿರಂಗಪಡಿಸಿದ್ದಾರೆ.
93ನೇ ವಾಯುಪಡೆ ದಿನಾಚರಣೆಯ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಐಎಎಫ್ ಮುಖ್ಯಸ್ಥರು, ಭಾರತವು ಎಫ್ -16 ಮತ್ತು ಜೆಎಫ್ -17 ವರ್ಗದ 4-5 ಫೈಟರ್ ಜೆಟ್‌ಗಳು ಮತ್ತು ಒಂದು ಕಣ್ಗಾವಲು ವಿಮಾನವನ್ನು ಗಾಳಿಯಲ್ಲಿ ಹೊಡೆದುರುಳಿಸಿತು ಎಂದು ಹೇಳಿದರು.
ಭಾರತವು ರಾಡಾರ್ ವ್ಯವಸ್ಥೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ರನ್‌ವೇಗಳು ಮತ್ತು ಹ್ಯಾಂಗರ್‌ಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದಾಗ ಇನ್ನೂ 4–5 ಎಫ್ -16 ಯುದ್ಧ ವಿಮಾನಗಳು ನಾಶವಾದವು ಎಂದು ಎಪಿ ಸಿಂಗ್ ಹೇಳಿದರು.
ಮೇ 10 ರಂದು ಭಾರತವು ಪಾಕಿಸ್ತಾನದ ಒಳಭಾಗದ 11 ಮಿಲಿಟರಿ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದಾಗ ಇದು ಸಂಭವಿಸಿದೆ. ಇದರಿಂದಾಗಿ ಇಸ್ಲಾಮಾಬಾದ್ ಕದನ ವಿರಾಮಕ್ಕಾಗಿ ಭಾರತವನ್ನು ಸಂಪರ್ಕಿಸಬೇಕಾಯಿತು ಎಂದು ಉಲ್ಲೇಖಿಸಿದ್ದಾರೆ.(ಏಜೆನ್ಸೀಸ್)