ಬಾಳೆಹೊನ್ನೂರಿನಲ್ಲಿ ದುರ್ಗಾಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬಿ.ಚನ್ನಕೇಶವ, ಭಾಸ್ಕರ್ ವೆನಿಲ್ಲಾ, ಆರ್.ಡಿ.ಮಹೇಂದ್ರ, ಕೃಷ್ಣಮೂರ್ತಿ, ಸುಧಾಕರ್ ಇದ್ದರು. 
ನ್ಯೂಸ್

ದುರ್ಗಾ ಮಂಟಪ ನಿರ್ಮಾಣಕ್ಕೆ ಭೂಮಿಪೂಜೆ

ಜಿ. ಗಜೇಂದ್ರ

ಬಾಳೆಹೊನ್ನೂರು: ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಪಟ್ಟಣದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ಅ.3ರಿಂದ 12ರವರೆಗೆ ನಡೆಯುವ ನವರಾತ್ರಿ ಪೂಜಾ ಮಹೋತ್ಸವದ ಪೂರ್ವಭಾವಿಯಾಗಿ ದುರ್ಗಾಮಂಟಪ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಲಾಯಿತು.
ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಸುದ್ದಿಗಾರರೊಂದಿಗೆ ಮಾತನಾಡಿ, ಸಮಿತಿಯು ಈಗಾಗಲೇ ನವರಾತ್ರಿ ಪೂಜಾ ಮಹೋತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಆರಂಭಿಸಿದ್ದು ಪೂಜಾ ಮಹೋತ್ಸದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬೃಹತ್ ದುರ್ಗಾಮಂಟಪ ನಿರ್ಮಾಣಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಚಾಲನೆ ನೀಡಲಾಗಿದೆ.
ಸಮಿತಿ 15ನೇ ವರ್ಷದ ಉತ್ಸವವನ್ನು ವಿಶಿಷ್ಟ, ವಿಭಿನ್ನವಾಗಿ ನೆರವೇರಿಸುವ ಉದ್ದೇಶ ಹೊಂದಿದ್ದು ಭಕ್ತರ ಸಹಕಾರ ಬಯಸಿದೆ ಎಂದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸದಸ್ಯರಾದ ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್ ದಿಡಿಗೆಮನೆ, ಉಪೇಂದ್ರ ಆಚಾರ್ಯ, ಗೋವಿಂದರಾಜು, ಜಗದೀಶ್ಚಂದ್ರ, ಕೆ.ಪ್ರಶಾಂತ್‌ಕುಮಾರ್, ಮೋಹನ್, ರಮೇಶ್ ಅರ್ಚಕ ಸುಬ್ರಹ್ಮಣ್ಯ ಭಟ್ ಮತ್ತಿತರರಿದ್ದರು.