ನ್ಯೂಸ್

ಫಿಕ್ಸ್​ ಆಯ್ತು ದುಲ್ಕರ್​ ಸಲ್ಮಾನ್​ ನಟನೆಯ 'ಕಿಂಗ್​ ಆಫ್​ ಕೋಥಾ' ರಿಲೀಸ್​ ಡೇಟ್

ಕೇರಳ: ಮಲಯಾಳಂ ಚಿತ್ರರಂಗದ ಸ್ಟಾರ್​ ನಟ ದುಲ್ಕರ್​ ಸಲ್ಮಾನ್​ ಅಭಿನಯದ 'ಕಿಂಗ್ ಆಫ್ ಕೋಥಾ' ಚಿತ್ರದ ಬಿಡುಗಡೆಯ ದಿನಾಂಕವನ್ನು ಇದೀಗ ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿದೆ.

ರೋಮ್ಯಾಂಟಿಕ್ ಚಿತ್ರ​ 'ಸೀತಾ ರಾಮಂ' ಮೂಲಕ ಚಿತ್ರರಸಿಕರ ಮನಗೆದ್ದ ನಟ ದುಲ್ಕರ್ ಸಲ್ಮಾನ್ ಅವರ ಹೊಸ ಚಿತ್ರಕ್ಕೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿತ್ತು. ಅಭಿಲಾಷ್ ಜೋಶಿ ನಿರ್ದೇಶನದ ಗ್ಯಾಂಗ್‌ಸ್ಟರ್, ಡ್ರಾಮಾ ಜಾನರ್​ನ ಸಿನಿಮಾದಲ್ಲಿ ನಟ ಮಾಸ್​ ಲುಕ್​ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಚಿತ್ರವು ಕೂಡ ಪ್ಯಾನ್ ಇಂಡಿಯನ್ ಸಿನಿಮಾ ಎಂದು ಹೇಳಲಾಗಿದೆ. ಚಿತ್ರದಲ್ಲಿ ದುಲ್ಕರ್​ಗೆ ನಾಯಕಿಯಾಗಿ ಐಶ್ವರ್ಯ ಲಕ್ಷ್ಮಿ ನಟಿಸಿದ್ದಾರೆ.

ಇತ್ತೀಚಿನ ವರದಿ ಪ್ರಕಾರ ಚಿತ್ರವು ಆಗಸ್ಟ್ 24, 2023 ರಂದು ಪ್ರಮುಖ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚೆನ್ನೈ ಮೂಲದ ವಿತರಣಾ ಕಂಪನಿ E4 ಎಂಟರ್‌ಟೈನ್‌ಮೆಂಟ್, ಚಿತ್ರವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ಚಿತ್ರದಲ್ಲಿ ಚೆಂಬನ್ ವಿನೋದ್, ಶಬೀರ್, ನೈಲಾ ಉಷಾ, ಶಮ್ಮಿ ತಿಲಕನ್, ಶಾಂತಿ ಕೃಷ್ಣ, ಪ್ರಸನ್ನ, ಗೋಕುಲ್ ಸುರೇಶ್, ಅನಿಖಾ ಸುರೇಂದ್ರನ್, ಸರಣ್ ಶಕ್ತಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).