ನ್ಯೂಸ್

ಕಾಲಿವುಡ್​ಗೆ ಶಾಕ್​.. ನಿರ್ಮಾಪಕ ದಿಲ್ಲಿಬಾಬು ಮೃತ್ಯು!

ಚೆನ್ನೈ: ಖ್ಯಾತ ತಮಿಳು ನಿರ್ಮಾಪಕ ದಿಲ್ಲಿಬಾಬು(50) ಸೋಮವಾರ (ಸೆ. 9) ಮೃತಪಟ್ಟಿದ್ದಾರೆ. ಮಧ್ಯರಾತ್ರಿ 12:30ರ ಸಮಯಕ್ಕೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಪೆರಂಬದೂರ್​ನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಅವರು ತಮಿಳು ಇಂಡಸ್ಟ್ರಿಯಲ್ಲಿ ‘ರಾಕ್ಷಸನ್’, ‘ಓಮೈ ಕಡವಲೆ’, ‘ಬ್ಯಾಚುಲರ್’ ಸೇರಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ಅಗಲಿಕೆ ಚಿತ್ರರಂಗಕ್ಕೆ ಶಾಕ್ ತಂದಿದೆ. ತಮಿಳು ಫಿಲ್ಮ್​ ಇಂಡಸ್ಟ್ರಿಯ ಅನೇಕರು ದಿಲ್ಲಿ ಬಾಬು ಸಾವಿಗೆ ಸಂತಾಪ ಸೂಚಿಸಿದ್ದಾರೆ.

ದಿಲ್ಲಿಬಾಬು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವು ಕೊನೆಯುಸಿರೆಳೆದಿದ್ದಾರೆ.