ಕಾನ್ಪುರ: ಶುಕ್ರವಾರ ಬೆಳಿಗ್ಗೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ನಡೆಸಿದ ಎನ್ಕೌಂಟರ್ನಲ್ಲಿ ಹತನಾದ ವಿಕಾಸ್ ದುಬೆಗೆ ನಡೆಸಲಾದ COVID-19 ಪರೀಕ್ಷೆಯಲ್ಲಿ ಸೋಂಕಿಲ್ಲದಿರುವುದು ದೃಢಪಟ್ಟಿದೆ. ಅವರ ಪ್ರಮುಖ ಸಹವರ್ತಿ ಅಮರ್ ದುಬೆಗೆ ಸೋಂಕು ದೃಢಪಟ್ಟಿದ್ದರಿಂದ ವಿಕಾಸ್ಗೂ ಈ ಪರೀಕ್ಷೆ ನಡೆಸಲಾಗಿತ್ತು. ಈಗ ವೈದ್ಯರ ತಂಡ ಆತನ ದೇಹದ ಮರಣೋತ್ತರ ಪರೀಕ್ಷೆಗೆ ಸಜ್ಜಾಗಿದೆ.
ಹತ್ಯೆಗೀಡಾದ ದುಬೆ ಶವವನ್ನು ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಆತನ ಕುಟುಂಬ ಸದಸ್ಯರು ಯಾರೂ ಇನ್ನೂ ಆಸ್ಪತ್ರೆಗೆ ಬಂದಿಲ್ಲ ಎನ್ನಲಾಗಿದೆ. ಆತನ ತಾಯಿ ಸರ್ಲಾ ದುಬೆ ಲಖನೌದಲ್ಲಿದ್ದರೆ, ಪತ್ನಿ ರಿಚಾ ಹಾಗೂ ಮಗನನ್ನು ಗುರುವಾರ ಸಂಜೆ ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ಸಹೋದರ ದೀಪ್ ಪ್ರಕಾಶ್ ದುಬೆ ಪರಾರಿಯಾಗಿದ್ದಾನೆ.