ನ್ಯೂಸ್

ಮನೆರುಚಿ: ಡ್ರೈ ಫ್ರೂಟ್ಸ್​ ಲಡ್ಡು ಮಾಡುವ ವಿಧಾನ

ರಮೇಶ್​ ಕುಮಾರ್​​ ಬಿ ಎಡಮೋಳೆ

ಶಿವರಾತ್ರಿಯ ಹಬ್ಬ ಹೊಸ್ತಿಲಲ್ಲಿ ನಿಂತಿದೆ. ಅಂದು ಮಾಡುವ ಉಪವಾಸಕ್ಕೆ ಪೂರಕವಾದ, ಆರೋಗ್ಯಕರ ಹಾಗೂ ಸುಲಭದಲ್ಲಿ ತಯಾರಿಸಬಲ್ಲ ಡ್ರೈಫ್ರೂಟ್ಸ್​ ಲಡ್ಡು ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿ: ಖರ್ಜೂರ-2 ಕಪ್ ಬಾದಾಮಿ ತುಂಡುಗಳು-ಅರ್ಧ ಕಪ್ ಗೋಡಂಬಿ ತುಂಡುಗಳು-ಅರ್ಧ ಕಪ್ ಒಣ ದ್ರಾಕ್ಷಿ-14 ಕಪ್ ಅಂಜೂರದ ತುಂಡುಗಳು-ಅರ್ಧ ಕಪ್ ಒಣಕೊಬ್ಬರಿ ತುರಿ-1 ಕಪ್ ಸಕ್ಕರೆ ಪುಡಿ-1 ಕಪ್ ಹುರಿಗಡಲೆ ಪುಡಿ-1 ಕಪ್ ತುಪ್ಪ-1 ಕಪ್ ಏಲಕ್ಕಿ ಪುಡಿ-ಅರ್ಧ ಚಮಚ

ಮಾಡುವ ವಿಧಾನ: ಖರ್ಜೂರ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಅಂಜೂರಗಳನ್ನು ಬೇರೆಬೇರೆಯಾಗಿ ಸ್ವಲ್ಪ ತುಪ್ಪದಲ್ಲಿ ಹುರಿದು, ಒಣಕೊಬ್ಬರಿ, ಹುರಿಗಡಲೆ ಪುಡಿ, ಏಲಕ್ಕಿ ಪುಡಿ ಸೇರಿಸಿ ಚನ್ನಾಗಿ ಕಲಕಿ. ಬಾಣಲೆಯಲ್ಲಿ ತುಪ್ಪ ಕಾಯಲಿರಿಸಿ, ಸಕ್ಕರೆ ಕರಗಿಸಿ. ಸಕ್ಕರೆ ಕರಗಿದ ನಂತರ, ಎಲ್ಲಾ ಸಾಮಗ್ರಿಗಳನ್ನು ಸೇರಿಸಿ, ಕೈಯಾಡಿ, ಒಲೆಯಿಂದ ಕೆಳಗಿರಿಸಿ. ತಣಿದ ನಂತರ ಬೇಕಾದ ಗಾತ್ರದಲ್ಲಿ ಉಂಡೆ ಕಟ್ಟಿ. ಮಕ್ಕಳಿಗೂ ಇಷ್ಟ.