ನ್ಯೂಸ್

ಮೈಮೇಲೆ ಹೆಬ್ಬಾವು ಹರಿದಾಡಿದರೂ ಕುಳಿತ ಜಾಗದಿಂದ ಕಿಂಚಿತ್ತು ಕದಲದ ಲಾರಿ ಚಾಲಕ! Viral Video

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ಹಾವು ಅಥವಾ ಹೆಬ್ಬಾವು ಕಂಡರೆ ಎಂಥವರಿಗಾದರೂ ಒಂದು ನಿಮಿಷ ಎದೆ ಝುಲ್ ಎನಿಸುತ್ತದೆ. ನಾವಿರುವ ಸ್ಥಳದಿಂದ 500 ಮೀ. ದೂರದಲ್ಲಿ ಹಾವಿದ್ದರೂ ಸಹ ಹೆದರಿ ಮೈಲಿಗಟ್ಟಲೆ ಓಡುವವರ ಸಂಖ್ಯೆಯೇ ಅಧಿಕ. ಉರಗ ಕಂಡರೆ ಅದೆನೋ ಜನಗಳಿಗೆ ಭಾರೀ ಆತಂಕ, ಭಯ ಆವರಿಸಿಕೊಳ್ಳುತ್ತದೆ. ಕೇವಲ ಹಾವು ಅಂತ ಹೇಳ್ತಿದ್ದಂತೆ ಬೆಚ್ಚಿಬೀಳುವಂತ ಜನ ಇಂದಿಗೂ ನಮ್ಮಲ್ಲಿದ್ದಾರೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ (Drunk Man) ಮಾತ್ರ ಹೆಬ್ಬಾವು ತನ್ನ ಮೈಮೇಲೆ ಹರಿದಾಡಿದರೂ ಕೂಡ ಕುಳಿತ ಜಾಗದಿಂದ ಕಿಂಚಿತ್ತು ಕದಲದೆ ಇರುವುದು ಇದೀಗ ದೃಶ್ಯದಲ್ಲಿ (Viral Video) ಸೆರೆಯಾಗಿದೆ.

ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ತನ್ನ ಲಾರಿಯನ್ನು ರಸ್ತೆಬದಿಗೆ ನಿಲ್ಲಿಸಿ, ಕಂಠ ಪೂರ್ತಿ ಮದ್ಯಪಾನ ಮಾಡಿದ ಚಾಲಕ, ತಾನು ಎಲ್ಲಿದ್ದೀನಿ? ಯಾವ ಸ್ಥಳದಲ್ಲಿ ಕುಳಿತ್ತಿದ್ದೀನಿ ಎಂಬುದನ್ನು ಕುಡಿದ ಅಮಲಿನಲ್ಲಿ ಸಂಪೂರ್ಣವಾಗಿ ಮರೆತು ಹೋಗಿದ್ದಾನೆ. ಕುಳಿತ ಜಾಗದಲ್ಲಿ ಮೈಮೇಲೆ ಹೆಬ್ಬಾವೊಂದು ಹತ್ತಿ ಹರಿದಾಡುತ್ತಿದ್ದರೆ, ಇತ್ತ ಈತ ಮಾತ್ರ ಸುಮ್ಮನಿರುವುದು ದೃಶ್ಯದಲ್ಲಿ ಕಂಡುಬಂದಿದೆ. ಸದ್ಯ ಈ ವಿಡಿಯೋ ಇದೀಗ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ ಸ್ಥಳೀಯರು

ವರದಿಗಳ ಪ್ರಕಾರ, ಈತನನ್ನು ಗಮನಿಸಿದ ದಾರಿಹೋಕರೊಬ್ಬರು, ಹೆಬ್ಬಾವು ಲಾರಿ ಚಾಲಕನ ಮೈಮೇಲೆ ಹರಿದಾಡಿದ್ದನ್ನು ಗಮನಿಸಿ, ಏಕಾಏಕಿ ಚೀರಾಡಿದ್ದಾರೆ. ಇಷ್ಟಾದರೂ ಆತ ಎಚ್ಚೆತ್ತುಕೊಳ್ಳದ ಕಾರಣ ತಕ್ಷಣವೇ ಸ್ಥಳೀಯರು ಒಗ್ಗೂಡಿ ಕುಡಿದ ನಶೆಯಲ್ಲಿದ್ದ ವ್ಯಕ್ತಿ ಹಾಗೂ ಹೆಬ್ಬಾವಿಗೆ ನೋವಾಗದಂತೆ ಜಾಗರೂಕತೆಯಿಂದ ಇಬ್ಬರನ್ನು ಬೇರ್ಪಡಿಸಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದು, ಹೀಗೂ ಉಂಟೆ ಎಂದು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).