UP: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ತನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಹಗಲಿನಲ್ಲೇ ಮಹಿಳೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಉತ್ತರ ಪ್ರದೇಶದ ಹಾಪುರದ ಮೊಹಲ್ಲಾ ಅರ್ದ್ಶಾನಗರದಲ್ಲಿ ಗುರುವಾರ (ಜು.17) ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಜಸ್ರುಪ್‌ನಗರ ದಸ್ತೋಯ್ ರಸ್ತೆಯ ನಿವಾಸಿಯಾದ ಮಹಿಳೆ ತನ್ನ ಮನೆಯ ಹೊರಗೆ ನಿಂತಿದ್ದಾಗ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಂದು ಆಕೆಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಪ್ರಾರಂಭಿಸಿದನು. ಆಕೆ ಪ್ರತಿಭಟಿಸಿದಾಗ, ಆತ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ.
ಸಾರ್ವಜನಿಕರ ಮುಂದೆಯೇ ಈ ಹಲ್ಲೆ ನಡೆದಿದ್ದರೂ, ಆರಂಭದಲ್ಲಿ ಯಾರೂ ಆ ವ್ಯಕ್ತಿಯನ್ನು ತಡೆಯಲು ಮುಂದಾಗಲಿಲ್ಲ. ಆ ವ್ಯಕ್ತಿ ಮಹಿಳೆಗೆ 15 ಸೆಕೆಂಡುಗಳಲ್ಲಿ 20 ಕಪಾಳಮೋಕ್ಷ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದಾಳಿಕೋರನನ್ನು ದೂರ ತಳ್ಳಿದ ನಂತರ, ಮಹಿಳೆ ತನ್ನ ಚಪ್ಪಲಿಯಿಂದ ಅವನಿಗೆ ಹೊಡೆದು, ಅವನು ರಸ್ತೆಗೆ ಬಿದ್ದ ನಂತರ ಅವನನ್ನು ಒದೆಯುವ ಮೂಲಕ ಪ್ರತೀಕಾರ ತೀರಿಸಿಕೊಂಡಳು.
ದೂರು ದಾಖಲಿಸಿದ ನಂತರ , ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹಲ್ಲೆಗೊಳಗಾದ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)