ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆಗೆ (Marriage) ಸಂಬಂಧಿಸಿದ ಸುದ್ದಿಗಳು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಕ್ಷುಲಕ ಕಾರಣಗಳಿಗೆ ಮದುವೆಗಳು ಮುರಿದು ಬೀಳುತ್ತಿವೆ. ಇದೀಗ ಬೆಳಕಿಗೆ ಬಂದಿರುವ ವಿಚಿತ್ರ ಘಟನೆಯೊಂದರಲ್ಲಿ ವರ ಕುಡಿದಿರುವ ವಿಚಾರ ಕೇಳಿ ವಧು ಮದುವೆಯನ್ನು ಕ್ಯಾನ್ಸಲ್ ಮಾಡಿದ್ದು, ದಿಬ್ಬಣವನ್ನು ವಾಪಸ್ ಕಳುಹಿಸಿದ್ಧಾರೆ.
ಘಟನೆಯು ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದ್ದು, ಪೊಲೀಸರು ವರ ಮತ್ತು ಆತನ ತಂದೆಯ ಜೊತೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಧುವಿನ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವರ ಹಾಗೂ ಆತನ ತಂದೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತು ಮಾತನಾಡಿರುವ ಬರೇಲಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕ್ಯೋಲ್ಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪಿಲಿಭಿತ್‌ನ ಬರ್ಖೇಡಾದ ವರನೊಂದಿಗೆ ಬರೇಲಿಯ ನಿವಾಸಿಯೊಂದಿಗೆ ಮದುವೆ (Marriage) ನಿಶ್ಚಯಿಸಲಾಗಿತ್ತು. ಮದುವೆ ದಿಬ್ಬಣ ಬರೇಲಿ ತಲುಪಿದ ಬಳಿಕ ವಧು-ವರ ಹೂವಿನ ಮಾಲೆಯನ್ನು ಬದಲಾಯಿಸಿಕೊಳ್ಳುವಾಗ ವಧುವು ವರನ ಕುತ್ತಿಗೆಗೆ ಹಾರವನ್ನು ಹಾಕಿದಳು. ಆದರೆ, ಕುಡಿದ ಮತ್ತಿನಲ್ಲಿದ್ದ ವರನು ವಧುವಿನ ಬದಲಾಗಿ ತನ್ನ ಸ್ನೇಹಿತನ ಕುತ್ತಿಗೆಗೆ ಹಾರ ಹಾಕಿದ್ದು, ವಧು ತೀವ್ರ ಮುಜುಗರಕ್ಕೀಡಾಗಿದ್ದಾಳೆ.
ವರನ ನಡೆಯಿಂದಾಗಿ ತೀವ್ರ ಮುಜುಕರಕ್ಕೀಡಾಗಿ ಕೋಪಗೊಂಡ ವಧು ಮದುವೆಯನ್ನು ನಿರಾಕರಿಸಿ ಮೆರವಣಿಗೆಯನ್ನು ಹಿಂದಕ್ಕೆ ಕಳುಹಿಸಿದಳು. ಬಳಿಕ ವಧುವಿನ ಮನವೊಲಿಸಲು ಉಭಯ ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರು ವರನನ್ನು ಮದುವೆಯಾಗಲು (Marriage) ನಿರಾಕರಿಸಿದಳು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ವಧುವಿನ ತಂದೆ ನೀಡಿದ ದೂರಿನ ಮೇರೆಗೆ ವರ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಸಾರ್ವಜನಿಕ ಅವಮಾನದ ಪ್ರಕರಣ ದಾಖಲಿಸಲಾಗಿದೆ.
ವರ, ಆತನ ತಂದೆ ಮತ್ತು ಇತರ ಮೂವರು ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 5 ಜನರಿಗೆ ದಂಡ ವಿಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಈ ವಿಚಾರದ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಬರೇಲಿ ವಿಔಆಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.