ನ್ಯೂಸ್

ಐಸ್ಕ್ರೀಮ್​ಗೂ ಡ್ರಗ್ಸ್ ಲೇಪ! ಶಿಕ್ಷಣ ಸಚಿವರ ಗುಮಾನಿ

ಚಾಮರಾಜನಗರ: ಸ್ಯಾಂಡಲ್​ವುಡ್ ಡ್ರಗ್ಸ್ ದಂಧೆ ನಡುವೆಯೇ ಶ್ರೀಮಂತರ ಮಕ್ಕಳು ಓದುವ ಶಾಲೆಗಳ ಬಳಿ ಐಸ್ ಕ್ರೀಂ, ಇತರ ತಿಂಡಿ, ತಿನಿಸುಗಳಿಗೆ ಡ್ರಗ್ಸ್ ಸವರಿ ಕೊಡುವ ಗುಮಾನಿ ಇರುವುದಾಗಿ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್​ಕುಮಾರ್ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನಿಗಾವಹಿಸಿ ಅಗತ್ಯ ಕ್ರಮ ವಹಿಸಲಾಗುವುದು. ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದ್ದು, ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಯುವಜನತೆಯನ್ನು ಹಾಳು ಮಾಡುವವರನ್ನು ಜೈಲಿಗೆ ಕಳುಹಿಸಲಾಗುವುದು. ಡ್ರಗ್ಸ್ ಸಮಾಜವನ್ನು ದುರ್ಬಲ ಮಾಡುವ ಪ್ರಯತ್ನ. ಇದನ್ನು ಬೇರು ಸಮೇತ ಕಿತ್ತು ಹಾಕಬೇಕು. ಮೂರು ವರ್ಷದ ಹಿಂದೆಯೇ ಬಿಜೆಪಿ ಇದರ ವಿರುದ್ಧವಾಗಿ ಧ್ವನಿ ಎತ್ತಿತ್ತು ಎಂದಿದ್ದಾರೆ.