ನ್ಯೂಸ್

ಮೆಕ್ಸಿಕೋದಲ್ಲಿ ಡ್ರಗ್ಸ್​ಗ್ಯಾಂಗ್ ವಾರ್​: 53 ಮೃತ್ಯು- 51 ಮಂದಿ ನಾಪತ್ತೆ!

ಮೆಕ್ಸಿಕೋ: ಉತ್ತರ ಅಮೆರಿಕಾದ ಸಿನಾಲೋವಾದಲ್ಲಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಡ್ರಗ್ಸ್​ ಬಣಗಳ ಬಡಿದಾಟದಲ್ಲಿ ಇಲ್ಲಿ ತನಕ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಸೆ.9 ರಂದು ಸಿನಾಲೋವಾ ಕಾರ್ಟೆಲ್‌ನಲ್ಲಿ ಪ್ರತಿಸ್ಪರ್ಧಿ ಬಣಗಳ ನಡುವೆ ಮತ್ತೊಮ್ಮೆ ಘರ್ಷಣೆ ಪ್ರಾರಂಭವಾಗಿದ್ದು, ಶುಕ್ರವಾರ(ಸೆ.21)ಕನಿಷ್ಠ 53 ಮಂದಿ ಮೃತಪಟ್ಟಿದ್ದಾರೆ. 51 ಮಂದಿ ಕಾಣೆಯಾಗಿದ್ದಾರೆ. 2024ರ ಜುಲೈನಲ್ಲಿ ಆರಂಭವಾದ ಹಿಂಸಾಚಾರ ಇನ್ನೂ ಕಡಿಮೆಯಾಗಿಲ್ಲ. ಸಿನಾಲೋವಾ ಕಾರ್ಟೆಲ್, ಡ್ರಗ್ ಕಾರ್ಟೆಲ್‌ನ ಎರಡು ಪ್ರಬಲ ಬಣಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ.

ಒಂದು ಬಣದ ಇಸ್ಮಾಯಿಲ್ ಎಲ್ ಮೇಯೊ ಜಂಬಾಡಾ ನನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬಂಧಿಸಲಾಯಿತು. ಲಾಸ್ ಚಾಪಿಟೋಸ್ ಎಂಬ ಮತ್ತೊಂದು ಬಣದ ಹಿರಿಯ ಸದಸ್ಯ ತನ್ನನ್ನು ಅಪಹರಿಸಿ ಯುನೈಟೆಡ್ ಸ್ಟೇಟ್ಸ್‌ಗೆ ಕರೆದೊಯ್ದಿದ್ದಾನೆ ಎಂದು ಜಂಬಾಡಾ ಆರೋಪಿಸಿದ್ದಾನೆ. ಇದರ ಹಿನ್ನೆಲೆಯಲ್ಲಿ ಸೆ.9ರಂದು ಗುಂಡಿನ ಚಕಮಕಿ ಆರಂಭವಾಗಿದ್ದು, ರಾಜಧಾನಿ ಕುಲಿಯಾಕನ್ ನಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇದರಿಂದಾಗಿ ಹಲವು ಪ್ರದೇಶಗಳಲ್ಲಿ ಶಾಲೆಗಳು, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿತ್ತು.