ನ್ಯೂಸ್

ರಾಗಿಣಿ ಕೈಯಲ್ಲಿ 'ರಾಮಾಯಣ'ನಾ?

arunakunigal

ಬೆಂಗಳೂರು: ಡ್ರಗ್ಸ್ ಕೇಸ್​ನಲ್ಲಿ ನ್ಯಾಯಾಂಗ ಬಂಧನಕ್ಕೊಳಪಟ್ಟ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ ಪುಸ್ತಕ ಹಿಡಿದು ಜೈಲಿಗೆ ಹೋಗುತ್ತಿರುವ ದೃಶ್ಯ ವೈರಲ್​ ಆಗಿದೆ.

ಸುಮಾರು ಹನ್ನೊಂದು ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿದ್ದ ರಾಗಿಣಿಯನ್ನು ಸೋಮವಾರ ಸಂಜೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರ್ಟ್​ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕರೆತಂದರು. ಈ ವೇಳೆ ಪೊಲೀಸ್ ವಾಹನದಿಂದ ಇಳಿಯುವಾಗಲೇ ನಟಿಯ ಕೈಯಲ್ಲಿ ಪುಸ್ತಕವೊಂದಿತ್ತು. ಅದನ್ನು ಹಿಡಿದುಕೊಂಡೇ ನಟಿ ಜೈಲಿನ ಒಳಗೆ ಹೋದರು. ಇದನ್ನೂ ಓದಿರಿ ‘ನಂಗೆ ಸಂಜನಾನೂ ಗೊತ್ತಿಲ್ಲ, ರಾಗಿಣಿನೂ ಗೊತ್ತಿಲ್ಲ… ಗೊತ್ತಿರೋದು ನನ್ನ ಹೆಂಡ್ತಿ ಮಾತ್ರ’

ನಟಿಯ ಕೈಯಲ್ಲಿದ್ದ ಪುಸ್ತಕ 'ರಾಮಾಯಣ' ಎನ್ನಲಾಗುತ್ತಿದೆ. ಆಧ್ಯಾತ್ಮಿಕದಿಂದ ನೆಮ್ಮದಿ ಕಂಡುಕೊಳ್ಳಲು ಮತ್ತು ಜೈಲಿನಲ್ಲಿ ಕಾಲ ಕಳೆಯಲು ರಾಗಿಣಿ 'ರಾಮಾಯಣ' ಪುಸ್ತಕದ ಮೊರೆಹೋಗಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇತ್ತ ಮಗಳು ಡ್ರಗ್ಸ್​ ಕೇಸ್​ನಲ್ಲಿ ಜೈಲು ಸೇರುತ್ತಿದ್ದಂತೆ ನೊಂದ ರಾಗಿಣಿ ತಂದೆ ರಾಕೇಶ್​ ಅವರು ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ. ನಗರದ ಜ್ಯುಡಿಶಿಯಲ್ ಲೇಔಟ್​ನ ನ್ಯಾಯಾಂಗ ಬಡಾವಣೆಯ ಅನನ್ಯ ಅಪಾರ್ಟ್​ಮೆಂಟ್​ನಲ್ಲಿ ರಾಗಿಣಿಯ ಕನಸಿನ ಮನೆ ಇದೆ. ಮೂರು ಬಿಎಚ್​ಕೆ ಮನೆಯನ್ನು 2 ಕೋಟಿ ರೂಪಾಯಿಗೆ ಸೇಲ್​ಗೆ ಇಟ್ಟಿದ್ದಾರೆ.