MHA: ಮಾದಕವಸ್ತು ಕಳ್ಳಸಾಗಾಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಭಾರತದಾದ್ಯಂತ ಬಂಧನಕೊಳ್ಳಗಾಗಿರುವ ಸುಮಾರು 16 ಸಾವಿರ ವಿದೇಶಿ ಪ್ರಜೆಗಳನ್ನು ದೇಶದಿಂದ ಗಡಿಪಾರು ಮಾಡಲು ಗೃಹ ಸಚಿವಾಲಯ ತೀರ್ಮಾನ ತೆಗೆದುಕೊಂಡಿದೆ ಎಂದು ಅಧೀಕೃತ ಮೂಲಗಳು ವರದಿ ಮಾಡಿವೆ.
ಇದನ್ನೂ ಓದಿ: Chanakya Niti: ಈ ಮಾರ್ಗಗಳನ್ನು ಅನುಸರಿಸಿದರೆ, ನೀವು ಏನನ್ನೂ ಹೇಳದೆಯೇ ನಿಮ್ಮ ಶತ್ರುವನ್ನು ಸೋಲಿಸಬಹುದು..!
ಈ ಸಂದರ್ಭದಲ್ಲಿ ಬಾಂಗ್ಲಾದೇಶ, ಫಿಲಿಫೈನ್ಸ್, ಮ್ಯಾನ್ಮಾರ್, ಮಲೇಷ್ಯಾ, ಘಾನಾ, ಮತ್ತು ನೈಜೀರಿಯಾ ಸೇರಿದಂತೆ ಹಲವು ದೇಶಗಳಿಂದ ಬಂಧಿತ ಪ್ರಜೆಗಳನ್ನು ಗಡಿಪಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮಾದಕ ವಸ್ತುಗಳ ನಿಯಂತ್ರಣ ಬ್ಯೂರೋ (NCB) ಸಲ್ಲಿಸಿದ ವರದಿ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ವಿರುದ್ಧ ನಡೆದ ಅತಿದೊಡ್ಡ ಕ್ರಮಗಳಲ್ಲಿ ಇದು ಕೂಡ ಒಂದು ಎಂದು ವಿವರಿಸಲಾಗಿದೆ. ಹಾಗೆಯೇ, ವಿದೇಶಿ ಪ್ರಜೆಗಳ ಮೇಲೆ ಮಾದಕ ವಸ್ತು ಕಳ್ಳಸಾಗಣಿಕೆಯಿಂದ ಹಿಡಿದು ಸಾಗಾಣಿಕೆಯವರೆಗೆ ಅಪರಾಧಗಳನ್ನು ಹೊರಿಸಿದ್ದು, ಪ್ರಸ್ತುತ ಇವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ವ್ಯಕ್ತಿಗಳ ಪಟ್ಟಿಯನ್ನು ಈಗಾಗಲೇ, ಗೃಹ ಸಚಿವಾಲಯ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದ್ದು, ಹೊಸ ವಲಸೆ ಕಾನೂನಿನ ನಿಬಂಧನೆಯ ಅಡಿಯಲ್ಲಿ ಗಡಿಪಾರು ಮಾಡಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)