ನ್ಯೂಸ್

ಸ್ಯಾಂಡಲ್​ವುಡ್​ ಸಂಪರ್ಕದಲ್ಲಿದ್ದ ಗೋವಾ ಮೂಲದ ಡ್ರಗ್ ಪೆಡ್ಲರ್​ ಬಂಧನ...

lakshmihegde

ಎನ್​ಸಿಬಿ(ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋ) ಮಂಗಳವಾರ ಗೋವಾ ಮೂಲದ ಡ್ರಗ್​ ಪೆಡ್ಲರ್​ ಎಫ್​ ಅಹ್ಮದ್​ ಎಂಬಾತನನ್ನು ಬಂಧಿಸಿದೆ.

ಈತ ಬೆಂಗಳೂರಿಗರಿಗೆ, ಪ್ರವಾಸಿಗರಿಗೆ ಗಾಂಜಾ ಸೇರಿ ಹಲವು ಬಗೆಯ ಡ್ರಗ್​​ಗಳನ್ನು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಅಹ್ಮದ್​ ಬಳಿ ಇದ್ದ ಸುಮಾರು 3.5 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಅಹ್ಮದ್​ಗೆ ಕನ್ನಡ ಚಿತ್ರರಂಗದ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕವಿದೆ. ಅವರಿಗೂ ಡ್ರಗ್ಸ್​ ಒದಗಿಸಿದ ಬಗ್ಗೆ ಮಾಹಿತಿ ಇದೆ ಎಂದು ಎನ್​ಸಿಬಿ ಹೇಳಿದೆ. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಯಾರು, ಸ್ಯಾಂಡಲ್​ವುಡ್​ಗೆ ಏನು ಮಾಡಿದ್ದಾರವರು; ಸಾರಾ ಗೋವಿಂದು ಕಿಡಿ

ಅಹ್ಮದ್​ ಗೋವಾದ ಪ್ರಸಿದ್ಧ ರೆಸಾರ್ಟ್​​ನಲ್ಲಿ ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ. ಡ್ರಗ್​ ರಾಕೆಟ್​​ ತನಿಖೆ ನಡೆಸುತ್ತಿರುವ ಎನ್​ಸಿಬಿ ದೆಹಲಿ, ಮುಂಬೈ ಸೇರಿ ಹಲವು ಪ್ರಮುಖ ನಗರಗಳಲ್ಲಿ ದಾಳಿ ನಡೆಸಿತ್ತು. ಅದೇ ವೇಳ ಅಹ್ಮದ್​ ಬಂಧನವಾಗಿದೆ.

ಮಾದಕ ವಸ್ತು ಜಾಲ ಸ್ಯಾಂಡಲ್​ವುಡ್​ನಲ್ಲೂ ಇದೆ ಎಂಬುದು ಸದ್ಯ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ವಿಚಾರ. ಡ್ರಗ್ಸ್​ ಪೆಡ್ಲರ್​ ಜತೆ ಸ್ಯಾಂಡಲ್​ವುಡ್​ನ ಪ್ರಮುಖ ನಟ-ನಟಿಯರಿಗೂ ಲಿಂಕ್ ಇದೆ ಎಂಬುದನ್ನು ಎನ್​ಸಿಬಿಯೇ ಹೇಳಿದೆ. ಅದಕ್ಕೆ ಪೂರಕವೆಂಬಂತೆ ನಿರ್ದೇಶಕ ಇಂದ್ರಜಿತ್​ ಲಂಕೇಶ್​ 15 ಮಂದಿಯ ಹೆಸರನ್ನೂ ಸಿಸಿಬಿಗೆ ಹೇಳಿದ್ದಾರೆ. (ಏಜೆನ್ಸೀಸ್)