ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಖ್ಯಾತ ನಿರೂಪಕಿ ಅನುಶ್ರೀ ಶೀಘ್ರವೇ ಅರೆಸ್ಟ್ ಆಗ್ತಾರೆ ಎಂದು ಶುಕ್ರವಾರವಷ್ಟೇ ಸರಣಿ ಟ್ವೀಟ್ ಮೂಲಕ ಬಾಂಬ್ ಸಿಡಿಸಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಇದೀಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
'ಕರೊನಾ ಇದೆ, ಹತ್ತಿರ ಬರಬೇಡಿ. ಇದು ಇವತ್ತು ಪ್ರದರ್ಶನ ಆಗಲಿರೋ ಹೊಸ ಡ್ರಾಮ. ಪೊಲೀಸರು ಅರೆಸ್ಟ್ ಮಾಡ್ತಾರೆ ಅಂತ ಗೊತ್ತಾದ ತಕ್ಷಣಕ್ಕೆ ಶುರು ಆಗುತ್ತೆ ಈ ಕಥೆ. ನಾಟಕದ ರಾಣಿಯ ಹೊಸ ಅವತಾರ ಇಂದು' ಎಂದು ಪರೋಕ್ಷವಾಗಿ ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀಗೆ ಪ್ರಶಾಂತ್ ಸಂಬರಗಿ ಟಾಂಗ್ ಕೊಟ್ಟಿದ್ದಾರೆ.
ಇಂದು ಬೆಳಗ್ಗೆ (ಶನಿವಾರ) ಮತ್ತೊಂದು ಟ್ವೀಟ್ ಮಾಡಿರುವ ಸಂಬರಗಿ, ಅರೆಸ್ಟ್ ಆಗೋ ಭಯದಲ್ಲಿ ತನಗೆ ಕರೊನಾ ಸೋಂಕು ದೃಢಪಟ್ಟಿದೆ, ಹತ್ತಿರ ಬರಬೇಡಿ ಎಂದು ಡ್ರಾಮ ಶುರುಮಾಡುತ್ತಾಳೆ ಎಂದು ಟೀಕಿಸಿದ್ದಾರೆ.